Select Your Language

Notifications

webdunia
webdunia
webdunia
webdunia

ಎಂಟಿಬಿ V/S ಶರತ್ ಟಾಕ್ ವಾರ್

MTB V/S Sarath Talk War
ಸಚಿವ ಎಂ.ಟಿ.ಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವೆ ಟಾಕ್ ವಾರ್ ಮುಂದುವರೆದಿದೆ. ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸ್ಮಶಾನ ಜಾಗ ಒತ್ತುವರಿ ಆರೋಪ ಕೇಳಿಬಂದಿದೆ. ತೆನೆಯೂರು ಗ್ರಾಮದ ಸ್ಮಶಾನ ಜಾಗ ಶಾಸಕರ ಹೆಸರಿನಲ್ಲಿದೆ ಎಂದು ಎಂ.ಟಿ.ಬಿ ನಾಗರಾಜ್ ಆರೋಪಿಸಿದ್ದಾರೆ. ಈ ಆರೋಪಕ್ಕೆ ಶಾಸಕ ಶರತ್​ ಬಚ್ಚೇಗೌಡ ತಿರುಗೇಟು ನೀಡಿದ್ದಾರೆ. ಕೋರ್ಟ್​​ಗೆ ಹೋಗುವುದು ನ್ಯಾಯ ಕೇಳಲು, ಅನ್ಯಾಯ ಮಾಡಿ ಹೋಗಿಲ್ಲ. ಆಪರೇಷನ್ ಕಮಲದ ಸಮಯದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ಯಾಕೆ..? ಎಂ.ಟಿ.ಬಿ ನಾಗರಾಜ್ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಳ್ತಿದ್ದಾರೆ. ತೆನೆಯೂರು ಗ್ರಾಮದ ಸರ್ವೇ ನಂ.20ರಲ್ಲಿ 4 ಎಕರೆ ಸ್ಮಶಾನ ಜಾಗ ಇದೆ. ರಾಜಕಾಲುವೆ ಒತ್ತುವರಿ ಮಾಡಿ ಬಾಗ್ಮನೆ ಟೆಕ್ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಕೆಡವಲು ಬಂದ ಅಧಿಕಾರಿಗಳನ್ನ ತಡೆದಿದ್ದು ಯಾಕೆ..? ಮೊದಲು ಅದಕ್ಕೆ ಉತ್ತರ ನೀಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 4 ದಿನ ಮಳೆ ಮುನ್ಸೂಚನೆ