Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಕೇದಾರನಾಥ ಪ್ರವಾಸ

ಮೋದಿ ಕೇದಾರನಾಥ ಪ್ರವಾಸ
ಕೇದಾರನಾಥ , ಶುಕ್ರವಾರ, 21 ಅಕ್ಟೋಬರ್ 2022 (16:40 IST)
ಭಾರತದಾದ್ಯಂತ ದೀಪಾವಳಿಯ ಸಂಭ್ರಮ ಶುರುವಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಕೇದಾರನಾಥ ,ಬದರಿನಾಥ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಕೇದಾರನಾಥಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಕೇದಾರನಾಥ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೇದಾರನಾಥ ಧಾಮದಲ್ಲಿ ಬೆಳಗಿನ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಚೋಳ ಡೋರ ಸಾಂಪ್ರದಾಯಿಕ ಹಿಮಾಚಲಿ ಉಡುಗೆಯನ್ನು ಧರಿಸಿ, ಅವರು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಮೋದಿ ಕೇದಾರನಾಥ ರೋಪ್ ವೇ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯ ನಂತರ ಅವರು ಕೆಲವು ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ನಂತರ ಬದರಿನಾಥ್‌ಗೆ ಭೇಟಿ ನೀಡಲು ಸಿದ್ಧರಾಗಿದ್ದಾರೆ ಮತ್ತು ಮನ ಗ್ರಾಮದಲ್ಲಿ ರೋಪ್‌ವೇ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ. ಕೇದಾರನಾಥದಲ್ಲಿನ ರೋಪ್‌ವೇ ಸುಮಾರು 9.7 ಕಿಮೀ ಉದ್ದವಿದೆ. ಇದು ಗೌರಿಕುಂಡ್​ನಿಂದ ಕೇದಾರನಾಥಕ್ಕೆ ಸಂಪರ್ಕ ಕಲ್ಪಿಸುವ ಮಹತ್ವಕಾಂಕ್ಷಿ ಯೋಜನೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಎಪಿ ವಿರುದ್ಧ ಅಮಿತ್​ ಶಾ ಪ್ರತಿತಂತ್ರ