Publish Date: Sun, 14 Jul 2019 (10:58 IST)
Updated Date: Sun, 14 Jul 2019 (11:00 IST)
ಬೆಂಗಳೂರು : ಮೈತ್ರಿ ಸರ್ಕಾರದ ಅತೃಪ್ತ ಶಾಸಕರಲ್ಲೊಬ್ಬರಾದ ಎಂಟಿಬಿ ನಾಗರಾಜ್ ಅವರು ಕಂಡಿಷನ್ ಒಂದರ ಮೇರೆಗೆ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಮೈತ್ರಿಪಕ್ಷಗಳ ನಾಯಕರ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ನನ್ನ ಜೊತೆ ರಾಜೀನಾಮೆ ನೀಡಿದ ಡಾ| ಕೆ. ಸುಧಾಕರ್ ಅವರು ರಾಜೀನಾಮೆ ವಾಪಾಸ್ ಪಡೆದರೆ ನಾನು ವಾಪಸ್ ಪಡೆಯುತ್ತೇನೆ. ನಾನು ಹಾಗೂ ಸುಧಾಕರ್ ಒಟ್ಟಿಗೆ ರಾಜೀನಾಮೆ ನೀಡಿದ್ದರಿಂದ ಇಬ್ಬರೂ ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲದೇ ನಾಳೆ ಮಧ್ಯಾಹ್ನದೊಳಗೆ ಸುಧಾಕರ್ ಅವರನ್ನು ಸಂಪರ್ಕಿಸಿ ಅವರ ಮನವೊಲಿಸುತ್ತೇನೆ. ಆ ಬಳಿಕ ಇಬ್ಬರೂ ಒಟ್ಟಿಗೆ ಸೇರಿ ಸೋಮವಾರ ರಾಜೀನಾಮೆ ಹಿಂಪಡೆಯುತ್ತೇವೆ. ಒಂದು ವೇಳೆ ಸುಧಾಕರ್ ಅವರು ರಾಜೀನಾಮೆ ವಾಪಸ್ ಪಡೆಯಲು ನಿರಾಕರಿಸಿದರೆ ತಾನೊಬ್ಬನೇ ಕಾಂಗ್ರೆಸ್ನಲ್ಲಿದ್ದು ಏನ್ ಮಾಡಲಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.