Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾರಿ ಕೇಳಿದ ಸಂಸದ ಪ್ರತಾಪ್ ಸಿಂಹ

ಸಾರಿ ಕೇಳಿದ ಸಂಸದ ಪ್ರತಾಪ್ ಸಿಂಹ
bangalore , ಮಂಗಳವಾರ, 6 ಡಿಸೆಂಬರ್ 2022 (18:00 IST)
ಮೈಸೂರು ಎಕ್ಸ್​​ಪ್ರೆಸ್ ವೇ ಬೈಪಾಸ್ ಓಪನ್ ತಡವಾಗಿದ್ದಕ್ಕೆ ಸಂಸದ ಪ್ರತಾಪ್​​ ಸಿಂಹ ಕ್ಷಮೆ ಕೋರಿದ್ದಾರೆ. ನವೆಂಬರ್ ಅಂತ್ಯದ ವೇಳೆ ಮದ್ದೂರು ಬೈಪಾಸ್ ಓಪನ್ ಆಗುತ್ತೆ ಎಂದು ಸಂಸದ ಪ್ರತಾಪ್​​​ ಸಿಂಹ ಹೇಳಿದ್ರು. ಫೇಸ್ ಬುಕ್ ಲೈವ್ ಮೂಲಕ ದಶಪಥ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ. ಆದರೆ ಅದು ಐದಾರು ದಿನ ತಡವಾಗಿದೆ.  ಮಳೆಯಿಂದ ಬೈಪಾಸ್ ಕಾಮಗಾರಿ ತಡವಾಗಿದೆ. ಇದೀಗ ಎಕ್ಸ್​​ಪ್ಯಾನ್ಷನ್​​​ ಜಾಯಿಂಟ್ ಕೆಲಸ ಮುಕ್ತಾಯವಾಗಿದೆ. ಸೇಫ್ಟಿ ಆಡಿಟಿಂಗ್, ಲೋಡ್ ಟೆಸ್ಟಿಂಗ್, ಮಾರ್ಕಿಂಗ್ ಕೂಡ ಮುಗಿದಿದೆ. ಒಂದೆರಡು ದಿನದಲ್ಲೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ. ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾದ್ರೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಕನಿಷ್ಠ 15ರಿಂದ 20 ನಿಮಿಷ ಉಳಿತಾಯವಾಗುತ್ತೆ. ಕೆಲವೇ ದಿನಗಳಲ್ಲಿ ಶ್ರೀರಂಗಪಟ್ಟಣ ಬೈಪಾಸ್ ಕೂಡ ಓಪನ್ ಆಗಲಿದೆ ಎಂದು ಅವರು ತಿಳಿಸಿದರು. ಹನಕರೆ, ಯಲಿಯೂರು, ಇಂಡವಾಳು ಸೇರಿದಂತೆ ಹಲವೆಡೆ ಅಂಡರ್ ಪಾಸ್ ಕಾಮಗಾರಿ ಆಗಬೇಕಿದೆ. ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಪೂರ್ಣವಾಗಲು ಇನ್ನು ಎರಡು ತಿಂಗಳು ಬೇಕಾಗುತ್ತದೆ ಎಂದರು. ಮದ್ದೂರು ಪ್ಲೈ ಓವರ್ ಮೇಲೆ ಸಂಚರಿಸಿ ಸಂಸದರು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್​​​-ಬಸ್​​​​ ಡಿಕ್ಕಿ, ಮೂವರು ಸಾವು