Publish Date: Tue, 06 Dec 2022 (15:54 IST)
Updated Date: Tue, 06 Dec 2022 (15:59 IST)
ನಿನ್ನೆ ಗುಜರಾತ್ನಲ್ಲಿ ಅಂತಿಮ ಹಂತದ ಮತದಾನ ಆಗಿದೆ. ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ. ಗುಜರಾತ್ನಲ್ಲಿ ಹಿಂದೆಂದಿಗಿಂತ BJP ಹೆಚ್ಚಿನ ಸ್ಥಾನದ ಮೂಲಕ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನಪರಿಷತ್ ಸದಸ್ಯ N. ರವಿಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮೀಕ್ಷೆಯೊಂದರಲ್ಲಿ BJPಗೆ 117 ಸ್ಥಾನ ಬರುತ್ತೆ ಅಂತ ಬಂದಿದೆ. ಉಳಿದೆಲ್ಲಾ ಸಮೀಕ್ಷೆಗಳು 140 ಸ್ಥಾನ ಬರುತ್ತೆ ಎಂದು ಹೇಳಿವೆ. ಗುಜರಾತ್ನಲ್ಲಿ 27 ವರ್ಷಗಳ ಕಾಲ ಅಧಿಕಾರ ನಡೆಸಿರೋ ಬಿಜೆಪಿ, ಅಧಿಕಾರಕ್ಕೆ ಬಂದ್ರೆ 32 ವರ್ಷ ಕಾಲ ಅಧಿಕಾರ ನಡೆಸುವ ಪಕ್ಷ ಆಗಲಿದೆ. ಬಿಜೆಪಿ ಅಂದ್ರೆ ರೈತರು, ರಸ್ತೆ ನಿರ್ಮಾಣ, ಬಿಜೆಪಿ ಅಂದ್ರೆ ಗೌರವ. ಹೀಗಾಗಿ BJP ಭಾರತದ 130 ಕೋಟಿ ಜನ ಹೆಮ್ಮೆ ಪಡುವ ಹಾಗೆ ಅಧಿಕಾರ ನಡೆಸುತ್ತಿದೆ ಎಂದು ತಿಳಿಸಿದರು.
geetha
Publish Date: Tue, 06 Dec 2022 (15:54 IST)
Updated Date: Tue, 06 Dec 2022 (15:59 IST)