Publish Date: Wed, 05 Apr 2023 (16:50 IST)
Updated Date: Wed, 05 Apr 2023 (15:35 IST)
ಇರಾನ್ನ ಈಶಾನ್ಯ ಭಾಗದಲ್ಲಿರುವ ಮಶಾದ್ ನಗರದ ಬಳಿ ಇರುವ ಪಟ್ಟಣದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಹಿಜಾಬ್ ಧರಿಸದ ಇಬ್ಬರು ಮಹಿಳೆಯರಿಗೆ ಮೊಸರು ಎರಚಿರುವ ವಿಡಿಯೋ ವೈರಲ್ ಆಗಿದೆ. ಇದಾದ ಮೇಲೆ ಹಿಜಾಬ್ ಕಾನೂನಿನ ಪರವಾಗಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿಕೆ ನೀಡಿದ್ದಾರೆ. ರಾಜ್ಯ ಟೆಲಿವಿಷನ್ನಲ್ಲಿ ಲೈವ್ನಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಕೆಲವರು ಹಿಜಾಬ್ ಅನ್ನು ನಂಬುವುದಿಲ್ಲ ಎಂದು ಹೇಳಿದರೆ ಅವರ ಮನವೊಲಿಸುವುದು ಒಳ್ಳೆಯದು. ಹಿಜಾಬ್ ಇಂದು ಒಂದು ಕಾನೂನು ವಿಷಯ ಎಂದು ಹೇಳಿದ್ದಾರೆ. ಇರಾನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋ ತುಣುಕಿನಲ್ಲಿ ಅಂಗಡಿಯಲ್ಲಿ ಹಿಜಾಬ್ ಧರಿಸದ ಇಬ್ಬರು ಮಹಿಳಾ ಗ್ರಾಹಕರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಮಹಿಳೆಯರ ಮೇಲೆ ದಾಳಿ ಮಾಡಿದ ಪುರುಷನು ಆ ಮಹಿಳೆಯರ ತಲೆಯ ಮೇಲೆ ಮೊಸರನ್ನು ಸುರಿಯುತ್ತಾನೆ. ಇಬ್ಬರು ಮಹಿಳೆಯರ ತಲೆಯ ಮೇಲೆ ಮೊಸರು ಸುರಿದ ವ್ಯಕ್ತಿಗೆ ಇರಾನ್ ಅಧಿಕಾರಿಗಳು ಬಂಧನ ವಾರಂಟ್ ಹೊರಡಿಸಿದ್ದು, ಕಟ್ಟು ನಿಟ್ಟಾದ ಸ್ತ್ರೀ ಉಡುಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ ಮಹಿಳೆಯರ ವಿರುದ್ಧವೂ ವಾರಂಟ್ನ್ನ ಹೊರಡಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.