ಬೆಂಗಳೂರಿನ ಗೊರುಗುಂಟೆಪಾಳ್ಯದ ಬಾಂಬೆ ರೈಯಾನ್ ಗಾರ್ಮೆಂಟ್ಸ್ ಎದುರು ಮಹಿಳೆಯರು ಮೂರುದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪಿಂಚಣಿ ಹಣ ನೀಡಲು ಬಾಂಬೆ ರೈಯಾನ್ ಕಂಪೆನಿ ನಿರಾಕರಿಸುತ್ತಿರುವುದೇ ಇದಕ್ಕೆ ಕಾರಣವಂತೆ. ಈ ಪಿಂಚಣಿಗೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ ಬಾಂಬೆ ರೈಯಾನ್ ಕಂಪೆನಿ.
ಅಪೆಕ್ಸ್ ಗಾರ್ಮೆಂಟ್ಸ್ ಅನ್ನು ಕಾರ್ಮಿಕರಿಗೆ ಮಾಹಿತಿ ನೀಡದೇ ಬಾಂಬೆ ರೈಯಾನ್ ಕಂಪೆನಿಗೆ ಮಾರಾಟ ಮಾಡಿದ್ದಾರೆ.
ಕಾರ್ಮಿಕರಿಗೆ ನೀಡಬೇಕಿದ್ದ ಪಿಂಚಣಿ ಹಣ ನೀಡದೇ ಬಾಂಬೆ ರೈಯಾನ್ ಕಂಪನೆಗೆ ಅಪೆಕ್ಸ್ ಮಾರಾಟ ಮಾಡಿದೆ.
ಐದು ವರ್ಷದಿಂದ ಅಪೆಕ್ಸ್ ಗಾರ್ಮೆಂಟ್ಸ್ ನಲ್ಲಿ ದುಡಿದ್ದೇವೆ ಸಿಗಬೇಕಿದ್ದ ಪಿಂಚಣಿ ಹಣ ನೀಡಲು ನಿರಾಕರಿಸುತ್ತಿದೆ ಕಂಪೆನಿ ಎಂದು ಕಾರ್ಮಿಕರು ದೂರಿದ್ದಾರೆ. ಅಪೆಕ್ಸ್ ಕಂಪೆನಿಯರು ಬಾಂಬೆ ರೈಯಾನ್ಸ್ ಕಂಪೆನಿ ಎಂದು ಹೆಸರು ಬದಲಾಯಿಸಿಕೊಂಡು ಕಾರ್ಮಿಕರಿಗೆ ಕತೆ ಕಟ್ಟುತ್ತಿದೆ ಎಂದು ಕಾರ್ಮಿಕರು ತಮ್ಮ ದುಃಖ ತೋಡಿಕೊಂಡಿದ್ದಾರೆ.
ಇನ್ನು ಅಪೆಕ್ಸ್ ಗಾರ್ಮೆಂಟ್ಸ್ ನೀಡಬೇಕಾಗಿರುವ ಪಿಂಚಣಿಯನ್ನು ಬಾಂಬೆ ರೈಯಾನ್ ಕಂಪೆನಿ ನೀಡಲು ನಿರಾಕರಿಸುತ್ತಿದೆ. ಹಾಗಾಗಿ ಕಂಪೆನಿ ಎದುರು 400ಕ್ಕೂ ಹೆಚ್ಚು ಮಹಿಳೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.