ನವದೆಹಲಿ: ಸ್ತ್ರೀಯರು ಶಬರಿ ಮಲೆ ದೇಗುಲ ಪ್ರವೇಶಿಸಬಾರದು ಎಂದು ಇದುವರೆಗೆ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಇದಕ್ಕೆ ತೆರೆ ಬೀಳಲಿದೆಯೇ? ಇಂದು ಈ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.
ಮಹಿಳೆಯರು ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಮಹಿಳಾ ಪರ ಸಂಘಟನೆಗಳು ತಮ್ಮ ಪರವಾಗಿ ತೀರ್ಪು ಬರುವುದನ್ನು ಎದುರು ನೋಡುತ್ತಿದ್ದಾರೆ. ಈ ಪ್ರಸಿದ್ಧ ದೇಗುಲಕ್ಕೆ ಸ್ತ್ರೀಯರಿಗೆ ಪ್ರವೇಶ ನಿರ್ಬಂಧ ಹೇರಿರುವುದರ ಮೂಲಕ ಮಹಿಳಾ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಂಘಟನೆಗಳ ಆರೋಪವಾಗಿದೆ. ಒಂದು ವೇಳೆ ಕೋರ್ಟ್ ಮಹಿಳೆಯರ ಪರ ತೀರ್ಪು ನೀಡಿದರೆ ಹಲವು ವರ್ಷಗಳಿಂದ ನಡೆದು ಬರುತ್ತಿದ್ದ ಪದ್ಧತಿಗೆ ಬ್ರೇಕ್ ಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ