ತಮ್ಮ ಕ್ಷೇತ್ರಗಳನ್ನ ಕಡೆಗಣಿಸಿರುವ ಮತ್ತು ಜನಮೆಚ್ಚುವ ಕೆಲಸ ಮಾಡದ ಕಾಂಗ್ರೆಸ್`ನ 35ಕ್ಕೂ ಅಧಿಕ ಹಾಲಿ ಶಾಸಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕ್ಷೇತ್ರದ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್ ನಡೆಸಿರುವ ಆತರಿಕ ಸಮೀಕ್ಷೆ ವರದಿ ಹೈಕಮಾಂಡ್ ಕೈಸೇರಿದ್ದು, ಹಾಲಿ ಶಾಸಕರ ಕಾರ್ಯವೈಖರಿ ಬಗ್ಗೆ ಹಲವೆಡೆ ಅಸಮಾಧಾನ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ 35ಕ್ಕೂ ಅಧಿಕ ಶಾಸಕರಿಗೆ ಕೊಕ್ ಕೊಟ್ಟು ಹೊಸಬರಿಗೆ ಟಿಕೆಟ್ ನಿಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ರಾಹುಲ್ ಗಾಂಧೀ ಗಂಭೀರ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಫೋರ್ ಮತ್ತು ಆಂತರಿಕ ಸಮೀಕ್ಷೆ ಪ್ರಕಾರ, ಈಗ ಚುನಾವಣೆ ನಡೆದರೆ ಪಕ್ಷ ಮತ್ತೆ ಅಧಿಕರಕ್ಕೆ ಬರಲಿದೆ ಎಂಬ ವರದಿ ಸಿಕ್ಕಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಪಕ್ಷದ ಬಲವರ್ಧನೆ ಕುಂಠಿತ ಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಮಧ್ಯೆ, ಬೇರೆ ಪಕ್ಷಗಳಿಂದ ಕಾಂಗ್ರೆಸ್ ಸೇರಿರುವವರಿಗೂ ಟಿಕೆಟ್ ನೀಡು ಸಾಧ್ಯತೆ ಕಡಿಮೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ