Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ: ಅಮಿತ್ ಶಾ

ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ: ಅಮಿತ್ ಶಾ
ಬೆಂಗಳೂರು , ಬುಧವಾರ, 20 ಸೆಪ್ಟಂಬರ್ 2017 (13:07 IST)
2018ರ ವಿಧಾನಸಭೆ ಚುನಾವಣೆಗೆ ಟಾರ್ಗೆಟ್ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸೆಪ್ಟೆಂಬರ್‌ನೊಳಗೆ ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಆದೇಶಿಸಿದ್ದಾರೆ.
ದೆಹಲಿಯಲ್ಲಿಯೇ ಕುಳಿತು ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಶಾ, ಸೆಪ್ಟೆಂಬರ್‌ನೊಳಗೆ ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ. ರಾಜ್ಯದಲ್ಲಿ ಜನಾಂದೋಲನ ಸೃಷ್ಟಿಸಿ ಹೋರಾಟವನ್ನು ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ.
 
ಮುಂಬರುವ ಫೆಬ್ರವರಿಯವರೆಗೆ ರಾಜ್ಯ ಸರಕಾರದ ವಿರುದ್ಧದ ಹೋರಾಟಗಳು ಪೂರ್ಣಗೊಳ್ಳಬೇಕು. ಸರಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಬೇಕು.ಜಿಲ್ಲಾ, ತಾಲೂಕು ಮತ್ತು ಗ್ರಾಮಗಳವರೆಗೆ ಹೋರಾಟವನ್ನು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.
 
ಮುಂಬರುವ 2018ರ ಚುನಾವಣೆಯ ರಣತಂತ್ರವನ್ನು ರೂಪಿಸಿಕೊಂಡು ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಿ ಎಂದು ಬಿಜೆಪಿ ನಾಯಕರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಯಾವ ನಾಯಕರನ್ನೂ ಕಡೆಗಣಿಸುತ್ತಿಲ್ಲ: ಡಿ.ಕೆ.ಸುರೇಶ್ ಆರೋಪಕ್ಕೆ ಸಿಎಂ ಉತ್ತರ