Publish Date: Thu, 20 Apr 2023 (15:44 IST)
Updated Date: Thu, 20 Apr 2023 (15:46 IST)
ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಇನಾಯತ್ ಆಲಿಗೆ ಮಣೆ ಹಾಕಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.. KPCC ಅಧ್ಯಕ್ಷ D.K. ಶಿವಕುಮಾರ್ ವಿರುದ್ಧ ಮೊಯಿದ್ದೀನ್ ಬಾವಾ ಕಿಡಿಕಾರಿದ್ದಾರೆ.. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟಿಕೆಟ್ ಮಾರಾಟ ಮಾಡಿದ್ದಾರೆ, ಪಕ್ಷದ ಸರ್ವೆಯಲ್ಲಿ ಶೇಕಡ 78 ಮತಗಳು ನನ್ನ ಪರವಾಗಿ ಬಂದಿದ್ದವು, ಇನಾಯತ್ ಆಲಿಗೆ ಕೇವಲ ಶೇಕಡ 7 ಮತ ಸಿಕ್ಕಿದ್ದರೂ ಪಾಲುದಾರ ಎಂಬ ನೆಪದಲ್ಲಿ ಟಿಕೆಟ್ ಮಾರಿದ್ದಾರೆ.. ನನ್ನ ಟಿಕೆಟ್ ತಪ್ಪಿಸಿದ್ದು ಡಿ.ಕೆ. ಶಿವಕುಮಾರ್ ಅವರೇ ಅನ್ನೋದನ್ನ ಖಚಿತವಾಗಿ ಹೇಳುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ರು.. ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ, ಇನಾಯತ್ ಆಲಿ ಎಲ್ಲಿಂದ ಹಣ ಮಾಡಿದ್ದು ಗೊತ್ತಿದೆ, ಡಿಕೆಶಿ ನೀರಾವರಿ ಸಚಿವನಾದ ಬಳಿಕ ಬಂದಿದ್ದು, ಇನಾಯತ್ ಆಲಿ ಯಾರೆಂದೇ ಕ್ಷೇತ್ರದಲ್ಲಿ ಜನರಿಗೆ ಗೊತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತರಿಗೂ ಗೊತ್ತಿಲ್ಲ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಇನಾಯತ್ ಗೆದ್ದರೆ ನನ್ನ ತಲೆ ಕೊಡಲು ಸಿದ್ಧನಿದ್ದೇನೆ ಎಂದು ಮೊಯಿದ್ದೀನ್ ಬಾವ ಹೇಳಿದ್ರು.