ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ನಾಳೆಗೆ ಮುಂದೂಡಲಾಗಿದೆ.
ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ ಕೈಗೊಂಡ ನ್ಯಾಯಾಲಯ ಪರ-ವಿರೋಧ ವಾದ ವಿವಾದಗಳನ್ನು ಆಲಿಸಿದ ಮೇಲೆ ಈ ತೀರ್ಮಾನಕ್ಕೆ ಬಂದಿದೆ. ಆರೋಪಿ ಪರ ವಕೀಲರು ಮತ್ತಷ್ಟು ವಾದ ಮಂಡನೆಗೆ ಅವಕಾಶ ಕೇಳಿದ ಹಿನ್ನಲೆಯಲ್ಲಿ ನಾಳೆ ವಿಚಾರಣೆ ಮುಂದೂಡಲಾಗಿದೆ.
ಆರೋಪಿ ಪರ ವಕೀಲರ ವಾದಕ್ಕೆ ಪ್ರತಿವಾದ ಸಲ್ಲಿಸಿದ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್, ನಕ್ಕಲ್ ರಿಂಗ್ ಬಳಸಿ ಮುಖಕ್ಕೆ ಗುದ್ದಲಾಗಿದೆ. ಮೊದಲು ಹೊಡೆದವರು ನಲಪಾಡ್. ನಂತರ ಉಳಿದವರೂ ಕೂಡಾ ವಿದ್ವತ್ ಸಾವಿಗೆ ಕಾರಣವಾಗುವಷ್ಟು ಹೊಡೆದಿದ್ದಾರೆ. ಇದೆಲ್ಲಾಆರೋಪಿಗಳ ಮನಸ್ಥಿತಿಗೆ ಹೇಗಿತ್ತು ಎಂದು ಸಾಬೀತು ಮಾಡುತ್ತದೆ ಎಂದು ಶ್ಯಾಮ್ ಸುಂದರ್ ವಾದ ಮಂಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ