Publish Date: Mon, 01 May 2023 (17:50 IST)
Updated Date: Mon, 01 May 2023 (18:03 IST)
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರವಾಸವನ್ನು ಮಾಜಿ ಸಿಎಂ H.D. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಬಾಗಲಕೋಟೆಯ ಬಾದಾಮಿಯಲ್ಲಿ ಮಾತನಾಡಿದ ಅವರು, ಮೋದಿ ಇನ್ನೇನು ಒಂದು ವಾರ ಮಾತ್ರ ರಾಜ್ಯದಲ್ಲಿ ಇರ್ತಾರೆ. ಆಮೇಲೆ ಕರ್ನಾಟಕದಲ್ಲಿ ಏನು ಆಯ್ತು ಅಂತಾ ಕೇಳಲಿಕ್ಕೆ ಮೋದಿ ಬರ್ತಾರಾ ಎಂದು ಪ್ರಶ್ನಿಸಿದ್ರು. 9ನೇ ತಾರೀಖು ಆದ ಮೇಲೆ ಮೋದಿ ಕರ್ನಾಟಕಕ್ಕೆ ಟಾಟಾ ಹೇಳಿ ಹೋಗ್ತಾರೆ.. ಮತ್ತೆ ಈ ಕಡೆಗೆ ಬರೋದು ಪಾರ್ಲಿಮೆಂಟ್ ಚುನಾವಣೆಗೆ. ಅಲ್ಲಿಯವರೆಗೂ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರಲ್ಲ ಎಂದು ಕಿಡಿಕಾರಿದ್ರು.