Publish Date: Mon, 01 May 2023 (17:00 IST)
Updated Date: Mon, 01 May 2023 (17:54 IST)
2023ರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಬೆಮಲ್ ಕಾಂತರಾಜು ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಯಾಚನೆ ಮಾಡಿದ್ರು. ಪ್ರಚಾರದ ನಂತರ ತುರುವೇಕೆರೆಯ ಗುರುಭವನ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗಿಯಾದ್ರು.. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ.. ನಿಮ್ಮ ಜೀವನಕ್ಕೆ ಬಿಜೆಪಿ ಕಲ್ಲು ಹಾಕ್ತಿದೆ ಅಂತಾ ಬಿಜೆಪಿ ವಿರುದ್ದ ರಾಹುಲ್ ಗಾಂಧಿ ಕಿಡಿಕಾರಿದ್ರು.. ರೇಷನ್, ರಿಸರ್ವೇಶನ್, ಡ್ಯಾಂ, ಸಬ್ಸಿಡಿ ಎಲ್ಲವೂ ಕೊಟ್ಟಿದ್ದು ಕಾಂಗ್ರೆಸ್.. ಜೆಡಿಎಸ್ಗೆ 113 ಸೀಟ್ ಬರುತ್ತಾ..? ಸುಮ್ಮನೆ ಜೆಡಿಎಸ್ಗೆ ವೋಟ್ ಹಾಕಿ ನಿಮ್ಮ ಅಮೂಲ್ಯ ಮತವನ್ನ ವೇಸ್ಟ್ ಮಾಡ್ಕೋಬೇಡಿ.. ಇದು ನನ್ನಕೊನೆ ಚುನಾವಣೆ, ಒಂದು ವೋಟ್ ಹಾಕಿ ಅಂತಾ ರಾಹುಲ್ ಗಾಂಧಿ ಮತದಾರರಲ್ಲಿ ವಿನಂತಿಸಿಕೊಂಡ್ರು