Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅವಾಚ್ಯ ಪದ ಬಳಸಿ ಬಿಜೆಪಿ ನಾಯಕರ ಮೇಲೆ ಹರಿಹಾಯ್ದ ಸಿಎಂ ಇಬ್ರಾಹಿಂ

ಅವಾಚ್ಯ ಪದ ಬಳಸಿ ಬಿಜೆಪಿ ನಾಯಕರ ಮೇಲೆ ಹರಿಹಾಯ್ದ ಸಿಎಂ ಇಬ್ರಾಹಿಂ
ಬಾಗಲಕೋಟೆ , ಗುರುವಾರ, 4 ಏಪ್ರಿಲ್ 2019 (16:30 IST)
ಬಾಗಲಕೋಟೆ : ಬಿಜೆಪಿ ನಾಯಕರು ತಮಗೆ ವೋಟು ಕೇಳಿವ ಬದಲು ಮೋದಿಗೆ ವೋಟ್ ಹಾಕಿ ಎಂದು ಹೇಳಿತ್ತಿರುವುದಕ್ಕೆ ಇದೀಗ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವಾಚ್ಯ ಪದ ಬಳಕೆ ಮಾಡುವ ಮೂಲಕ ಬಿಜೆಪಿ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ.


ಬಾದಾಮಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,’ ಬಿಜೆಪಿಯವರು ಹೇಳ್ತಾರೆ ಗದ್ದಿಗೌಡರನ್ನ ನೋಡಬೇಡಿ, ಮೋದಿ ನೋಡಿ ವೋಟ್ ಹಾಕಿ ಅಂತಾ. ಹೆಣ್ಣು ಕೊಡಬೇಕಾದರೇ ಹುಡುಗನ್ನ ನೋಡ್ತಾರ, ಇಲ್ಲ ಅವರ ಅಪ್ಪನ ನೋಡ್ತಾರ? ಮದುವೆ ಹುಡುಗಿಯ ಅಮ್ಮನನ್ನು ನೋಡಿದರೆ ಸಾಕು ಮದುವೆ ಆಗ್ಬಿಡುತ್ತೆ’ ಎಂದು ಲೇವಡಿ ಮಾಡಿದ್ದಾರೆ.


‘ಶಾಸಕ ಶ್ರೀರಾಮುಲು ಹಾಗೂ ಸಿದ್ದರಾಮಯ್ಯರಿಗೆ ಮಧ್ಯೆ ಜನಳ ಮಾಡಿಸಿದ್ದಾರೆ. ಗಂಡಸ್ತನ ಇದ್ದರೇ ಮಾಜಿ ಸಿಎಂ ಯಡಿಯೂರಪ್ಪ ಅವರೇ ನಿಲ್ಲಬೇಕಿತ್ತು. ಬಿಜೆಪಿ ಅವರು ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡ್ತಾರೆ. ಬಳಿಕ ಈಶ್ವರಪ್ಪ ಹುಚ್ಚ, ಗಿಡ್ಡ ಅವನಿಗೆ ಒಂದು ಸೀಟು ಹಿಂದುಳಿದ ವರ್ಗಕ್ಕೆ ತೆಗೆದುಕೊಳ್ಳಲು ಆಗಿಲ್ಲ. ಮುಸ್ಲಿಂರನ್ನ ಅವನು ಮರೆತ್ತಿದ್ದಾನೆ’ ಎಂದು ಬಿಎಸ್‍ವೈ ಹಾಗೂ ಈಶ್ವರಪ್ಪ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ನಾಯಕರ ವಿರುದ್ಧವೇ ತಿರುಗಿ ಬಿದ್ದ ಮಂಡ್ಯ ಕೈ ಕಾರ್ಯಕರ್ತರು