ಕೋವಿಡ್ -19 ತಡೆ ಹಿನ್ನೆಲೆಯಲ್ಲಿ 150 ಹೈಫ್ಲೋ ಆಕ್ಸಿಜನ್ ಬೆಡ್ ಇರುವ ಐಸಿಯು ಅನ್ನು ಕೋವಿಡ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ.
ಹೀಗಂತ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದು, ಪ್ರತಿ ತಾಲ್ಲೂಕುಗಳಲ್ಲಿಯೂ ಕನಿಷ್ಠ 20 ಹೈಫ್ಲೋ ಆಕ್ಸಿಜನ್ ಇರುವ ಬೆಡ್ ಗಳನ್ನು ಮಾಡುವ ನಿಟ್ಟಿನಲ್ಲಿ ಯೋಜಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾದರೆ ತಾಲ್ಲೂಕು ಮಟ್ಟದಲ್ಲಿಯೂ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಎ ಗುಣಲಕ್ಷಣಗಳ ಕೋವಿಡ್ -19 ಪತ್ತೆಯಾಗಿದ್ದು, ಹೈಫ್ಲೋ ಆಕ್ಸಿಜನ್ ಅಗತ್ಯವಿಲ್ಲ. ಆದರೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ -19 ಚಿಕಿತ್ಸೆಗಾಗಿ ಬಲಪಡಿಸಲಾಗುತ್ತಿದೆ ಎಂದಿದ್ದಾರೆ.