Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಘೋಷಿಸಿದ ಪ್ಯಾಕೇಜ್ – ಬಿಜೆಪಿ ಸಂಸದ ಹೇಳಿದ್ದೇನು?

ಮೋದಿ ಘೋಷಿಸಿದ ಪ್ಯಾಕೇಜ್ – ಬಿಜೆಪಿ ಸಂಸದ ಹೇಳಿದ್ದೇನು?
ದಾವಣಗೆರೆ , ಗುರುವಾರ, 14 ಮೇ 2020 (16:37 IST)
ಲಾಕ್ ಡೌನ್ ಮೂರನೇ ಹಂತ ಮುಕ್ತಾಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಪ್ಯಾಕೇಜ್ ಘೋಷಣೆ ಮಾಡಿರೋದಕ್ಕೆ ಬಿಜೆಪಿ ಸಂಸದ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿರುವ ಇಪ್ಪತ್ತು ಲಕ್ಷ ಕೋಟಿಯ ಪ್ಯಾಕೇಜ್
ಸ್ವಾವಲಂಬಿ ಭಾರತ ನಿರ್ಮಾಣ ಪ್ರಯತ್ನದ ಮೊದಲ ಹೆಜ್ಜೆ ಯಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.

ಕೋವಿಡ್ -19 ನಿಂದ ಕಂಗಾಲಾಗಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವ ಜೊತೆ ಜೊತೆಗೆ ನಮ್ಮ ದೇಶದ ಆರ್ಥಿಕ ಜೀವನಾಡಿಯಾಗಿರುವ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಸಂದಿಗ್ಧದ ಪರಿಸ್ಥಿತಿಯಿಂದ ಪಾರು ಮಾಡುವತ್ತ  ಪ್ರಧಾನ ಮಂತ್ರಿಗಳು ಚಿತ್ತ ಹರಿಸಿದ್ದಾರೆ ಎಂದು ಸಿದ್ದೇಶ್ವರ ತಿಳಿಸಿದ್ದಾರೆ.

20 ಲಕ್ಷ ಕೋಟಿ ಪ್ಯಾಕೇಜ್‌ನ ಮೊದಲ ಭಾಗ ಇದಾಗಿದ್ದು, ಮುಂದಿನ ಭಾಗಗಳಲ್ಲಿ ರೈತರನ್ನು ಒಳಗೊಂಡು ಎಲ್ಲಾ ವರ್ಗದ ಜನರಿಗೆ ಅನುಕೂಲ ದೊರೆಯುವ ನಿರೀಕ್ಷೆಯಿದೆ. ಸಾವಿರ ಮೈಲು ದೂರದ ಪ್ರಯಾಣವೇ ಆದರೂ ಕೂಡ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗಬೇಕು.

ಅಂತಹ ಸ್ವಾವಲಂಬಿ ಭಾರತದ ಪ್ರಯಾಣದಲ್ಲಿ ಪ್ಯಾಕೇಜ್ ಘೋಷಣೆ ಮೂಲಕ ಪ್ರಧಾನಿಗಳು ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಘೋಷಣೆಯನ್ನು  ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾ ಪಂ ಹಾಲಿ ಅಧ್ಯಕ್ಷರ ಮುಂದುವರಿಕೆ ಮಾಡಿ ಎಂದ ಕೊಂಡಯ್ಯ