Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇಲ್ಮನೆ ಚುನಾವಣೆ ಟಿಕೆಟ್ ಗೊಂದಲ

ಮೇಲ್ಮನೆ ಚುನಾವಣೆ ಟಿಕೆಟ್ ಗೊಂದಲ
ಬೆಂಗಳೂರು , ಗುರುವಾರ, 18 ನವೆಂಬರ್ 2021 (18:30 IST)
ವಿಧಾನಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ಮೂರು ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ತೀವ್ರ ಕಸರತ್ತು ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಚುನಾವಣೆಗೆ ಅಖಾಡ ಸಿದ್ಧವಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು, ರಾಮನಗರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು ಒಟ್ಟು 8ಕ್ಷೇತ್ರ. ವಿಧಾನಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಮನಗರ ಕೇಂದ್ರವಾಗಿದ್ದು, ಜೆಡಿಎಸ್‌, ಕಾಂಗ್ರೆಸ್‌ ಮುಖಂಡರ ಪ್ರತಿಷ್ಠೆಯ ಕಣವಾಗಿದೆ. ಮತದಾರರ ಸಂಖ್ಯೆ ಎಷ್ಟು? ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 3898 ಮತದಾರರಿದ್ದಾರೆ.
 
ಇದರಲ್ಲಿ 1862 ಪುರುಷ ಮತದಾರರು, ಹಾಗೂ 2036 ಮಹಿಳಾ ಮತದಾರರು ಇದ್ದಾರೆ. ಬೆಂಗಳೂರು ಗ್ರಾಮಾಂತರ ಸ್ಥಳೀಯ ಕ್ಷೇತ್ರದಲ್ಲಿ ಒಟ್ಟು 227 ಮತಗಟ್ಟೆಗಳಿವೆ. ಕೈ-ದಳ ಪೈಪೋಟಿ: 2015ರಲ್ಲಿ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ, ಜೆಡಿಎಸ್‌ ಅಭ್ಯರ್ಥಿ ಇ.ಕೃಷ್ಣಪ್ಪ ವಿರುದ್ಧ 378ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದರು. ಈ ಭಾರಿ ಪುನ: ಇವೆರಡು ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೋ ನೈಟ್ ಗಾರ್ಡ್ಸ್ ನಿಯೋಜನೆ