Publish Date: Sat, 25 Apr 2020 (14:18 IST)
Updated Date: Sat, 25 Apr 2020 (14:21 IST)
ಕೋವಿಡ್ -19 ಟೆಸ್ಟ್ ನಡೆಸದಂತೆ ಜೆಡಿಎಸ್ MLC ಹಾಗೂ ಆತನ ಮಗ ಕಿರಿಕ್ ಮಾಡಿರುವ ಘಟನೆ ನಡೆದಿದೆ.
ಜನರನ್ನು ಎತ್ತಿಕಟ್ಟಿ ಕಿರಿಕ್ ಮಾಡಲು ಬಂದ ಜೆಡಿಎಸ್ MLC ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಆತನ ಮಗನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರಿಂದ ಕಿರಿಕ್ ನಡೆದಿದ್ದು, ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಘಟನೆ ನಡೆದಿದೆ.
ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೋವಿಡ್ ಟೆಸ್ಟ್ ನಡೆಯುತ್ತಿತ್ತು. ಅಂಬೇಡ್ಕರ್ ಭವನದ ಬಳಿ ಕೆ.ಟಿ.ಎಸ್ ಮನೆ ಇರೋ ಕಾರಣಕ್ಕೆ ಗಲಾಟೆ ಮಾಡಿದ್ದಾರೆ.
ಮನೆ ಇರುವ ಕಾರಣ ಟೆಸ್ಟ್ ಮಾಡಬೇಡಿ ಎಂದು ಜನರೊಂದಿಗೆ ಬಂದು ಕಿರಿಕ್ ಮಾಡಿದ್ದಾರೆ. ಜನರನ್ನು ಎತ್ತಿಕಟ್ಟಿಕೊಂಡು ಬಂದು ಕಿರಿಕ್ ಮಾಡಿದ ಪರಿಷತ್ ಸದಸ್ಯ ಇರುವಾಗಲೇ ಎಂಎಲ್ ಸಿ ಪುತ್ರ ವೈದ್ಯರು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾನೆ.
KTS ಪುತ್ರನಿಂದ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಕೂಡಲೇ ಪೊಲೀಸರು ಹಲ್ಲೆ ನಡೆಸಿದ ಎಂಎಲ್ ಸಿ ಪುತ್ರನನ್ನು ಬಂಧನ ಮಾಡಿದ್ದಾರೆ.