Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲಸು ತಿಂದರೆ ಏಡ್ಸ್ ಬರುವುದಿಲ್ಲ ಎಂದ ಶಾಸಕರಾರು?

ಹಲಸು ತಿಂದರೆ ಏಡ್ಸ್ ಬರುವುದಿಲ್ಲ ಎಂದ ಶಾಸಕರಾರು?
, ಭಾನುವಾರ, 24 ಜೂನ್ 2018 (21:27 IST)
ಹಲಸು ತಿಂದರೆ ಏಡ್ಸ್ ಬರುವುದಿಲ್ಲ ಎಂದ ಶಾಸಕರಾರು?
ಉಡುಪಿ: ಹಲಸು ತಿಂದರೆ ಮಾರಕ ಏಡ್ಸ್ ನಂತಹ ಖಾಯಿಲೆಗಳು ಬರುವುದಿಲ್ಲ. ಹೀಗಂತ ವೈದ್ಯರು ಹೇಳಿಲ್ಲ. ಈ ಮಾತನ್ನು ಹೇಳಿದವರು ಉಡುಪಿ ಶಾಸಕ ರಘುಪತಿ ಭಟ್ ಎಂದರೆ ನಂಬಲೇಬೇಕು.

ವೈದ್ಯ ಲೋಕಕ್ಕೆ ಸವಾಲಾಗಿರುವ ಏಡ್ಸ್‍ಗೆ ಮದ್ದೇ ಇಲ್ಲ ಎಂದು ಜನರು ಯೋಚಿಸುತ್ತಿದ್ದಾರೆ. ಆದರೆ ಉಡುಪಿ ಶಾಸಕ ಏಡ್ಸ್‍ಗೆ ಮದ್ದು ಹಲಸಿನ ಹಣ್ಣು ಎಂದು ಹಾಸ್ಯಾಸ್ಪದ ಹೇಳಿಕೆಯೊಂದನ್ನು ನೀಡಿದ್ದಾರೆ.
ಉಡುಪಿಯ ಪುಷ್ಪ ಹರಾಜು ಕೇಂದ್ರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹಲಸು ಮೇಳದ ಸಭಾ ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ಮಾತನಾಡಿ, ಹಲಸಿನ ಹಣ್ಣು ತಿಂದರೆ ಮಧುಮೇಹವನ್ನೂ ನಿಯಂತ್ರಿಸಲು ಸಾಧ್ಯವಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಲಸಿನ ಹಣ್ಣು ತಿನ್ನುವುದರಿಂದ ಏಡ್ಸ್ ಸೋಂಕು ತಗಲುವುದಿಲ್ಲ ಎಂದು ಹೇಳಿದ್ದಾರೆ. ಶಾಸಕರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಶಾಸಕರ ಹೇಳಿಕೆ ನಗೆ ಪಾಟಲಿಗೆ ಗುರಿಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ: ಯುವಕರಿಗೆ ಧರ್ಮದೇಟು