Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜಲ ಸಂಪನ್ಮೂಲ ಇಲಾಖೆ, ಪಿಡಬ್ಲ್ಯೂಡಿ, ಬಿಡಿಎ ಸೇರಿ ಇಲಾಖೆಗಳಲ್ಲಿ ಕಮಿಷನ್ ನಡೆಯುತ್ತಿದೆ ಎಂದು ಸಿದ್ದರಾಮಯ್ಯ, ಮುನಿರತ್ನ ಪ್ರಸ್ತಾಪ ಮಾಡಿದ್ದಾರೆಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
ಇನ್ನು ಈ ಹಿಂದೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಮೇಲೆ 10% ಭ್ರಷ್ಟಾಚಾರ ಆರೋಪ ಮಾಡಿದ್ರು.ಆಗ ಕಾಂಗ್ರೇಸ್ ನವರು ದಾಖಲೆ ಕೊಟ್ಟಿದ್ರಾ? ದಾಖಲೆ ಇಲ್ಲದೆ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.ನಮಗೆ ಮುಂದಿನ ಚುನಾವಣಾಗೆ ಇದು ಒಂದು ಅಸ್ತ್ರವಾಗಿದೆ.ರೈತರು, ಮಹಿಳೆಯರು,ಉದ್ಯೋಗ ಬೇರೆ ಬೇರೆ ವಿಚಾರಗಳಿವೆ.ಅದನ್ನ ಬಿಟ್ಟು ಸಿಎಂ ಮೇಲೆ ಆರೋಪ ಮಾಡ್ತಾರೆ.ಸಿಎಂ ಎಲ್ಲ ಸರಿಪಡಿಸುವುದಾಗಿ ಹೇಳಿದ್ರು.ಆದ್ರೆ ಸಿಎಂ ಮಾತು ಅಧಿಕಾರಿಗಳು ಕೇಳಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ .