Publish Date: Tue, 23 Aug 2022 (15:21 IST)
Updated Date: Tue, 23 Aug 2022 (15:22 IST)
ಮೈಸೂರು : ದೇವರು ಇಂತಹ ಆಹಾರವನ್ನೇ ತಿನ್ನಿ ಎಂದು ಹೇಳಿದ್ದಾನಾ ಎಂದು ಮುಸ್ಲಿಂರನ್ನು ಸಿದ್ದರಾಮಯ್ಯ ಕೇಳಲಿ, ಅದನ್ನು ಕೇಳಲು ಅವರಿಗೆ ತೊಡೆ ನಡುಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಮಾಂಸಾಹಾರ ತಿಂದು ದೇವಸ್ಥಾನ ಪ್ರವೇಶ ಮಾಡಬಾರದು ಎಂದು ದೇವರು ಹೇಳಿದ್ದಾನಾ ಎಂಬ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ದೇವರು ಇಂತಹ ಆಹಾರ ತಿಂದು ಬನ್ನಿ ಎಂದು ಹೇಳಿದ್ದಾನಾ ಎಂದು ಮುಸ್ಲಿಂರನ್ನು ಕೇಳಿ. ಮುಸ್ಲಿಂರಿಗೆ ಹಂದಿ ತಿನ್ನಬಾರದು ಎಂದು ಹೇಳಿದ್ದಾರಾ? ದನನೇ ತಿನ್ನಿ ಅಂತಾ ಹೇಳಿದ್ದಾರಾ? ಸಿದ್ದರಾಮಯ್ಯ ಅವರೇ ಅದನ್ನು ಕೇಳಲು ನಿಮಗೆ ತೊಡೆ ನಡುಗುತ್ತಾ? ಅದನ್ನು ಕೇಳಲು ನಿಮಗೆ ಆಗಲ್ವಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮನೆಯಲ್ಲಿ ಕೋಳಿ, ಮೀನು, ಹಂದಿ ಮಾಂಸ ಸೇರಿದಂತೆ ಏನು ಬೇಕಾದರೂ ತಿನ್ನಬಹುದು. ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲಾ ಇದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದರು.