Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಡ್ಡಿಗಳ ಮಾರಣಹೋಮ ಎನ್ನದಿದ್ರೆ ಗೌರಿ ಲಂಕೇಶ್ ಪ್ರಾಣ ಉಳಿಯುತಿತ್ತು: ಜೀವರಾಜ್

ಚಡ್ಡಿಗಳ ಮಾರಣಹೋಮ ಎನ್ನದಿದ್ರೆ ಗೌರಿ ಲಂಕೇಶ್ ಪ್ರಾಣ ಉಳಿಯುತಿತ್ತು: ಜೀವರಾಜ್
ಚಿಕ್ಕಮಗಳೂರು , ಗುರುವಾರ, 7 ಸೆಪ್ಟಂಬರ್ 2017 (15:45 IST)
ಚಿಕ್ಕಮಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಶಾಸಕ ಜೀವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಚಡ್ಡಿಗಳ ಮಾರಣಹೋಮ ಅಂತ ಬರೆಯದೇ ಇದ್ದಿದ್ದರೆ ಇವತ್ತು ಉಳಿಯುತ್ತಿರಲ್ಲವೇ? ಎಂದಿದ್ದಾರೆ.

ಶೃಂಗೇರಿ ನಗರದಲ್ಲಿ ನಡೆದ ಬೈಕ್ ಜಾಥಾದಲ್ಲಿ ಮಾತನಾಡಿದ ಜೀವರಾಜ್, ಸಿದ್ದರಾಮಯ್ಯನವರ ಸರ್ಕಾರದಲ್ಲಿ  11 ಆರ್ ಎಸ್ಎಸ್ ಮತ್ತು ಬಿಜೆಪಿ  ಕಾರ್ಯಕರ್ತರ ಹತ್ಯೆ ನಡೆದಾಗ ಚಡ್ಡಿಗಳ ಮಾರಣಹೋಮ ಅಂತ ಬರೆದಿದ್ದರು. ಅದನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಮಾರಣಹೋಮ ಅಂತ ಬರೆಯಬಹುದಿತ್ತು. ಹಾಗೆ ಬರೆದಿದ್ದರೆ ಗೌರಿ ಲಂಕೇಶ್ ಪ್ರಾಣ ಉಳಿಯುತಿತ್ತು. ಬಿಜೆಪಿ ಸರ್ಕಾರದಲ್ಲಿ ಕಲಬುರ್ಗಿ ಹಾಗ ಗೌರಿ ಲಂಕೇಶ್ ಹತ್ಯೆ ನಡೆಯುತಿತ್ತ ಎಂದು ಅವರು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್