Publish Date: Tue, 12 Jun 2018 (09:21 IST)
Updated Date: Tue, 12 Jun 2018 (09:23 IST)
ಗದಗ: ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ತಮ್ಮ ವಿರುದ್ಧ ಭೋಗಸ್ ಮತದಾನದ ಆರೋಪ ಹೊರಿಸಿದ ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ.
ಮೊನ್ನೆಯಷ್ಟೇ ಗದಗದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಿ ಶ್ರೀರಾಮುಲು ಎಚ್ ಕೆ ಪಾಟೀಲ್ ಭೋಗಸ್ ಮತ ಹಾಕಿದ್ದ ಗೆದ್ದಿದ್ದಾರೆ. ಈ ಬಗ್ಗೆ ಬಿಜೆಪಿ ವತಿಯಿಂದ ಚುನಾವಣಾಧಿಕಾರಿಗಳಿಗೆ ದೂರು ನೀಡಿ ಅವರ ಶಾಸಕ ಸ್ಥಾನ ರದ್ದುಗೊಳಿಸಲು ಒತ್ತಾಯಿಸಲಾಗುವುದು ಎಂದಿದ್ದರು.
ಇದಕ್ಕೆ ಸಿಟ್ಟಿಗೆದ್ದಿರುವ ಶಾಸಕ ಎಚ್ ಕೆ ಪಾಟೀಲ್, ಇಷ್ಟಕ್ಕೇ ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಅಸ್ತ್ರಕ್ಕೆ ಪ್ರತಿ ಅಸ್ತ್ರ ಸಿದ್ಧವಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ತಮಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರವಿಲ್ಲ. ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.