Publish Date: Wed, 11 Apr 2018 (15:24 IST)
Updated Date: Wed, 11 Apr 2018 (15:27 IST)
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಪುತ್ರ ಮೊಹಮ್ಮದ್ ನಲಪಾಡ್ ನಿಂದಾಗಿ ವಿವಾದಕ್ಕೀಡಾದ ಶಾಸಕ ಹ್ಯಾರಿಸ್ ಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಎದುರಾಗಿದೆ.
ಹ್ಯಾರಿಸ್ ಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ್ ಕೈ ನಾಯಕರ ಬಳಿ ಒತ್ತಾಯಿಸಿದ್ದಾರೆ. ಈ ಹಿಂದೆಯೂ ಈ ವದಂತಿಯಿತ್ತು.
ಆದರೆ ಇದೀಗ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ್ ಹ್ಯಾರಿಸ್ ಬದಲಿಗೆ ನನಗೇ ಟಿಕೆಟ್ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಬಳಿ ಒತ್ತಾಯಿಸಿದ್ದಾರೆ. ಇದಕ್ಕೆ ಇಬ್ಬರೂ ನಾಯಕರೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪುತ್ರನ ದೆಸೆಯಿಂದ ಶಾಸಕ ಹ್ಯಾರಿಸ್ ಗೆ ಈ ಬಾರಿ ಟಿಕೆಟ್ ಕೈ ತಪ್ಪಿದರೂ ಅಚ್ಚರಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.