Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬಾಗಲಕೋಟೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಎಚ್ ವೈ ಮೇಟಿಗೆ ಮಾತ್ರ ಟಿಕೆಟ್ ಕೊಡಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಗೆ ಒತ್ತಾಯಿಸಿದ್ದಾರೆ.
ಶಾಸಕರಾಗಿದ್ದಾಗಲೇ ಎಚ್ ವೈ ಮೇಟಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆದರೆ ನಂತರ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಲಾಗಿತ್ತು. ಹಾಗಿದ್ದರೂ ಈ ಪ್ರಕರಣ ಆಡಳಿತ ಪಕ್ಷಕ್ಕೆ ಸಾಕಷ್ಟು ಮುಜುಗರವುಂಟು ಮಾಡಿತ್ತು.
ಹೀಗಾಗಿ ಪಕ್ಷದ ಮಾನ ಹರಾಜು ಹಾಕಿದ ಮೇಟಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್ ಗೆ ಮನವಿ ಮಾಡಿದ್ದಾರೆ. ಇದಕ್ಕೆ ಇಬ್ಬರೂ ನಾಯಕರೂ ನೋಡೋಣವೆಂದು ಭರವಸೆಯನ್ನೂ ಕೊಟ್ಟಿದ್ದಾರಂತೆ. ಹಾಗಾಗಿ ಈ ಬಾರಿ ಎಚ್ ವೈ ಮೇಟಿಗೆ ಟಿಕೆಟ್ ಕೈ ತಪ್ಪಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.