Publish Date: Mon, 01 Oct 2018 (15:43 IST)
Updated Date: Mon, 01 Oct 2018 (16:37 IST)
ನಾನು ಬರುವ ಮೊದಲೇ ಹೇಗೆ ಕಾರ್ಯಕ್ರಮ ಆರಂಭ ಮಾಡಿದ್ರಿ ಅಂತ ಶಾಸಕರೊಬ್ಬರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ತಿಪ್ಪಾರೆಡ್ಡಿ ಇಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲಾಡಳಿತ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನ ತರಾಸು ರಂಗಮಂದಿರದಲ್ಲಿ ಆಚರಿಸಲಾಗುತ್ತಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು. ಸಚಿವರು ಬಂದ ಮೇಲೆ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಆದ್ರೆ ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಗಮನಕ್ಕೂ ಬರುವ ಮುನ್ನವೇ ಕಾರ್ಯಕ್ರಮ ಆರಂಭವಾಗಿದ್ದರಿಂದ ನಮಗೆ ನೀವು ಸಮಯವನ್ನು ಸರಿಯಾಗಿ ಹೇಳಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಅಲ್ಲದೆ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಅಂತ ಹೇಳಿ ಅಲ್ಲಿಂದ ಹೊರ ನಡೆದರು.
Jagadeesh
Publish Date: Mon, 01 Oct 2018 (15:43 IST)
Updated Date: Mon, 01 Oct 2018 (16:37 IST)