Publish Date: Sat, 19 Aug 2023 (18:01 IST)
Updated Date: Sat, 19 Aug 2023 (16:05 IST)
ಕಾಂಗ್ರೆಸ್ ನವರು ಅವರ ಪಕ್ಷದವರನ್ನೇ ಉಳಿಸಿಕೊಳ್ಳಕ್ಕಾಗ್ತಿಲ್ಲ.ಹಲವರು ಸಚಿವರು, ಶಾಸಕರು ಸರ್ಕಾರದ ವಿರುದ್ಧವೇ ಮಾತಾಡ್ತಿದಾರೆ.ಮೂರು ತಿಂಗಳಲ್ಲೇ ಅವರ ಸರ್ಕಾರದಲ್ಲೇ ಹಲವು ಸಮಸ್ಯೆಗಳಿವೆ.ಇಂಥವರು ಆಪರೇಷನ್ ಹಸ್ತ ಮಾಡ್ತಾರೆ ಅಂದ್ರೆ ಇವರ ಯಾವ ನಾಟಕ ವರ್ಕೌಟ್ ಆಗಲ್ಲ, ಇವರ ರಾಜಕೀಯ ತಂತ್ರಗಳು ವರ್ಕೌಟ್ ಆಗಲ್ಲ ಎಂದು ಅಶ್ವಥ್ ನಾರಾಯಣ್ ಲೇವಡಿ ಮಾಡಿದ್ದಾರೆ.
ನನಗೆ ಗೊತ್ತಿರುವ ಪ್ರಕಾರ ಬಿಜೆಪಿಯಿಂದ ಯಾರೂ ಬಿಟ್ ಹೋಗಲ್ಲ.ಕಾಂಗ್ರೆಸ್ ಗೆ ಯಾರೂ ಹೋಗಲ್ಲ.ಈ ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ.ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ.ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ ಮುಳುಗುತ್ತಿರುವ ಪಕ್ಷಕ್ಕೆ ಯಾರೂ ಹೋಗಲ್ಲ ಎಂದು ಅಶ್ವಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.