ವಿಧಾನ ಸಭೆ ಚುನಾವಣೆ ಮುಗಿದು ತಿಂಗಳುಗಳೇ ಕಳೆಯುತ್ತಿವೆ. ಆದರೆ ಈವರೆಗೂ ಆ ಕ್ಷೇತ್ರದ ಶಾಸಕರ ಕಚೇರಿ ಖಾಲಿ ಖಾಲಿಯಾಗಿಯೇ ಇದೆ.
ಶಾಸಕ ವಿ. ಮುನಿಯಪ್ಪರ ಕಛೇರಿ ಖಾಲಿ ಖಾಲಿಯಾಗಿದೆ. ಚುನಾವಣೆ ಮುಗಿದು ಒಂದು ವರ್ಷದ ಆಸು ಪಾಸಿನಲ್ಲಿದೆ.
ಒಮ್ಮೆಯಾದರೂ ಕಛೇರಿಗೆ ಆಗಮಿಸದ ಶಾಸಕ ವಿ. ಮುನಿಯಪ್ಪರ ಕ್ರಮ ಈಗ ಚರ್ಚೆಗೆ ಕಾರಣವಾಗುತ್ತಿದೆ. ಶಿಡ್ಲಘಟ್ಟ ವಿಧಾನ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪರ ಕಛೇರಿ ತುಂಬೆಲ್ಲಾ ಧೂಳುಮಯವಾಗಿದೆ.
ಹಳೆ ಖಾಲಿ ವಾಟರ್ ಬಾಟಲಿಗಳಿಂದ ಗಬ್ಬುನಾರುತ್ತಿರುವ ಶಾಸಕರ ಕಛೇರಿ ಈಗ ಚರ್ಚೆಗೆ ಗ್ರಾಸವೊದಗಿಸಿದೆ.
ಚಿಂತಾಮಣಿ ತಾಲ್ಲೂಕು ಕಛೇರಿ ಆವರಣದಲ್ಲಿರುವ ಶಾಸಕರ ಕಛೇರಿಗೆ ಶಾಸಕರೇ ಭೇಟಿ ನೀಡದಿರುವುದರಿಂದಾಗಿ,
ಚಿಲಕನೇರ್ಪು ಹೋಬಳಿಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವಲ್ಲಿ ಶಾಸಕ ವಿಫಲರಾಗಿದ್ದಾರೆ ಎಂದು ಜನರು ದೂರಿದ್ದಾರೆ.
ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಛೇರಿಗೆ ಆಗಮಿಸಿದ್ದರು. ಚುನಾವಣೆ ಮುಗಿದ ನಂತರ ಜನಸಾಮಾನ್ಯರ ಕೈಗೆ ಶಾಸಕ ವಿ. ಮುನಿಯಪ್ಪ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನರು ದೂರುತ್ತಿದ್ದಾರೆ.