ಕೊಡಗು ಈ ಹಿಂದೆ ನೆರೆಗೆ ತತ್ತರಿಸಿದ್ದ ಘಟನೆ ಮಾಸುವ ಮುನ್ನವೇ ರಾಜ್ಯಕ್ಕೆ ಮತ್ತೊಮ್ಮೆ ನೆರೆ ಅಪ್ಪಳಿಸಲಿದೆ ಎನ್ನುವ ಸುದ್ದಿ ಬಂದಿದೆ.
ಕರ್ನಾಟಕ ಸೇರಿದಂತೆ ದೇಶದ ಹಲವು ಕರಾವಳಿಯ ತಗ್ಗು ಪ್ರದೇಶಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ನೆರೆ ಉಂಟಾಗುವ ಸಾಧ್ಯತೆ ಇದೆ. ಭೂಮಿ ಮತ್ತು ಚಂದ್ರನ ನಡುವೆ ವರ್ಷದ ಕೆಲದಿನಗಳಲ್ಲಿ ಅಂತರ ಕಡಿಮೆಯಾಗಿ ಇಂತಹ ಪರಿಣಾಮಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನಕ್ಕೆ ಪೆರಿಜಿಯನ್ ಸ್ಪ್ರಿಂಗ್ ಟೈಡ್ ಎನ್ನಲಾಗುತ್ತದೆ.
ಈ ಬಾರಿ ಫೆ.19ರಿಂದ 24ರ ನಡುವೆ ಸ್ಪ್ರಿಂಗ್ ಟೈಡ್ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕ ಮತ್ತು ಗೋವಾ ಕರಾವಳಿ ಪ್ರದೇಶದಲ್ಲಿ ಮಧ್ಯಾಹ್ನ 1ರಿಂದ ತಡರಾತ್ರಿ 2ರ ವರೆಗೆ ಸಮುದ್ರದಲ್ಲಿ ಭರದ ಅಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವೇಳೆ ತೀವ್ರ ಮಳೆ, ಸಮುದ್ರ ಉಬ್ಬರದಿಂದ ತಗ್ಗು ಪ್ರದೇಶಗಳಲ್ಲಿ ನೆರೆ ಉಂಟಾಗಲಿದೆ ಎನ್ನಲಾಗಿದೆ.