Publish Date: Thu, 30 Apr 2020 (10:52 IST)
Updated Date: Thu, 30 Apr 2020 (10:56 IST)
ಬೆಂಗಳೂರು : ನಾನು ಆರೋಗ್ಯವಾಗಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಕೊರೊನಾ ಸೋಂಕಿತ ಪತ್ರಕರ್ತನೊಂದಿಗೆ ಸಂಪರ್ಕದಲ್ಲಿದ್ದ ಹಿನ್ನಲೆಯಲ್ಲಿ ಕರ್ನಾಟಕದ ನಾಲ್ವರು ಸಚಿವರನ್ನು ಹೋಂ ಕ್ವಾರಂಟೈನನಲ್ಲಿಡಲಾಗಿದೆ. ಅವರಲ್ಲಿ ವೈದ್ಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ಒಬ್ಬರು.
ಇದೀಗ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ನಾನು ಆರೋಗ್ಯವಾಗಿದ್ದೇನೆ . ಸಂಪುಟ ಸಭೆಗೆ ಹೋಗದಿರಲು ನಿರ್ಧಾರ ಮಾಡಿದ್ದೇನೆ. ಮೇ5ರವರೆಗೆ ಕ್ವಾರಂಟೈನ್ ನಲ್ಲಿರುತ್ತೇನೆ. ಇಂದು ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತೇನೆ. ಕೊರೊನಾ ಬಗ್ಗೆ ಯಾವುದೇ ಆತಂಕಬೇಡ ಎಂದು ತಿಳಿಸಿದ್ದಾರೆ.