Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿನಿ ಜಂಬೂ ಸವಾರಿ.. ನೋಡಲು ಬಂದ ಜನಸಾಗರ

ಮಿನಿ ಜಂಬೂ ಸವಾರಿ.. ನೋಡಲು ಬಂದ ಜನಸಾಗರ
ಬೆಂಗಳೂರು , ಬುಧವಾರ, 5 ಅಕ್ಟೋಬರ್ 2022 (17:01 IST)
ಮೈಸೂರು ಮಾದರಿಯಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚೌಡೇಶ್ವರಿ ವೃತ್ತದಲ್ಲಿ ಇಂದು ನಾಡದೇವಿತೆ ಚೌಡೇಶ್ವರಿ ಅಮ್ಮನವರ ಜಂಬೂಸವಾರಿ ಲಕ್ಷಾಂತರ ಮಂದಿ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.. ಇನ್ನು ಈ ಮಿನಿ ಜಂಬೂಸವಾರಿಯನ್ನ ನೋಡಿ ಜನರು ಖುಷಿ ಪಟ್ರು.
ಜಾನಪದ ಕಲಾತಂಡಗಳು ಹಾಗೂ ಗ್ರಾಮೀಣ ಪ್ರದೇಶದ ಹಲವು ಕಲಾತಂಡಗಳ ಕಲಾ ಪ್ರದರ್ಶನ ದಸರಾ ಹಬ್ಬಕ್ಕೆ ಮತ್ತಷ್ಟು ಕಳೆಗಟ್ಟುವಂತೆ ಮಾಡಿತು
 
ವಿಶ್ವ ವಿಖ್ಯಾತ ಮೈಸೂರು ಜಂಬೂಸವಾರಿ ಉತ್ಸವವನ್ನು ನೋಡಲು ಲಕ್ಷಾಂತರ ಮಂದಿ ಬೇರೆ ಬೇರೆ ರಾಜ್ಯಗಳಿಂದ ಮೈಸೂರು ಹೋಗ್ತಾರೆ ಆದ್ರೆ ಜಂಬೂ ಸವಾರಿನ ನೋಡಲು ಆಗುವುದಿಲ್ಲ ಅದೇ ಮಾದರಿಯಲ್ಲಿ ಬೆಂಗಳೂರು ಹೂಗಳಂತೆ ದೂರದಲ್ಲಿರುವ ಆನೇಕಲ್ ಚೌಡೇಶ್ವರಿ ವೃತ್ತದಲ್ಲಿ ಇಂದು ಚೌಡೇಶ್ವರಿ ಅಮ್ಮನ ಮೂರ್ತಿಯನ್ನು ಆನೆ ಮೇಲೆ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು..
 
ಆನೇಕಲ್ ಮಿನಿ ದಸರಾ ಜಂಬುಸವಾರಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಶಾಸಕ ಬಿ ಶಿವಣ್ಣ ಪುರಸಭೆ ಅಧ್ಯಕ್ಷ ಪದ್ಮನಾಭ ಎಂಎಲ್ಸಿ ಗೋಪಿನಾಥ ರೆಡ್ಡಿ ಪುಷ್ಪ ನಮನ ಮಾಡುವುದರ ಮೂಲಕ ನಮ್ಮ ಚೌಡೇಶ್ವರಿ ಅಮ್ಮನವರಿಗೆ ನಮನ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಜೋಡೋ ಯಾತ್ರೆಯಲ್ಲ,ಭಾರತ ಬಿಟ್ಟು ಓಡೋ ಯಾತ್ರೆ'- ನಳಿನ್ ಕುಮಾರ್ ಕಟೀಲ್ ವ್ಯಂಗ್ಯ