Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಾರ್ವಜನಿಕರೊಬ್ಬರು ಖಾತೆ ಕುರಿತಂತೆ ಮಾಹಿತಿ ನೀಡದ ಬಿಬಿಎಂಪಿ ಅಧಿಕಾರಿಗೆ ರಾಜ್ಯ ಮಾಹಿತಿ ಆಯೋಗ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕರೊಬ್ಬರು ಖಾತೆ ಕುರಿತಂತೆ ಕೋರಿದ್ದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ನೀಡದ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಹೊರಮಾವಿನ ಬಿಬಿಎಂಪಿ ಕಂದಾಯ ಅಧಿಕಾರಿ ದೊಡ್ಡ ಶಾಮಾಚಾರಿ ಅವರಿಗೆ ರಾಜ್ಯ ಮಾಹಿತಿ ಆಯೋಗ 10 ಸಾವಿರ ರೂ ದಂಡವನ್ನು ವಿಧಿಸಿ ಆದೇಶಿಸಿದೆ.
ಪ್ರಕರಣ ಸಂಬಂಧ ಮಾಹಿತಿ ಒದಗಿಸಲು ವಿಳಂಬ ಮಾಡಿದ ಕುರಿತು ಬೆಳಗಾವಿಯ ರಾಮಮೂರ್ತಿ ನಗರ ನಿವಾಸಿ ಪ್ರವೀಣ್ ಗೋಪಿನಾಥನ್ ಎಂಬುವರು ಸಲ್ಲಿಸಿದ್ದ ದೂರಿನ ಸಂಬಂಧ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎಸ್.ಎಲ್.ಪಾಟೀಲ್ ಅವರು ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ, ಕಂದಾಯ ಅಧಿಕಾರಿ ದೊಡ್ಡಶಾಮಾಚಾರಿ ಅವರಿಂದ ವೇತನದಲ್ಲಿ 5 ಸಾವಿರ ರೂ.ಗಳಂತೆ ಎರಡು ತಿಂಗಳು ಸೇರಿ 10 ಸಾವಿರ ರೂ ಕಡಿತಗೊಳಿಸಬೇಕು. ಈ ಮೊತ್ತವನ್ನು ಸರ್ಕಾರದ ಖಾತೆಗೆ ಜಮೆ ಮಾಡಿಸಿಕೊಳ್ಳಬೇಕು. ಈ ಸಂಬಂಧದ ವರದಿಯನ್ನು ಆಯೋಗದ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ