Select Your Language

Notifications

webdunia
webdunia
webdunia
webdunia

ಹಾಲಿನ ದರ ಕಡಿಮೆ ಮಾಡಲು ಹಾಲು ಒಕ್ಕೂಟ ಆದೇಶ

Milk union orders to reduce milk price
bangalore , ಬುಧವಾರ, 31 ಮೇ 2023 (21:18 IST)
ಹಾಲಿನ ಪ್ರೋತ್ಸಾಹ ಧನ ಲೀಟರ್ ಗೆ 1.50 ರೂ. ಕಡಮೆ ಮಾಡಲಾಗುವುದೆಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಆದೇಶ ಹೊರಡಿದೆ.ಜೂನ್ 1 ರಿಂದ ಪರಿಷ್ಕೃತ ಆದೇಶ ಜಾರಿ ಯಾಗಲಿದ್ದು,ಈ ಹಿಂದೆ ಬೇಸಿಗೆಯ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಿಸಿದ್ದ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಏ. 1ರಿಂದ ಮೇ. 31 ರವರೆಗೆ ವಿಶೇಷ ಪ್ರೋತ್ಸಾಹ ಧನ ನೀಡಿತ್ತು, ಆದರೆ ಈಗ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆಇದ್ದು,ಮೇವಿನ ಸಮಸ್ಯೆ ಬಗೆಹರಿದಿರುವುದರಿಂದ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ ಇದ್ರಿಂದಾಗಿ ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಹಾಲು ಉತ್ಪಾದನೆ ಯಾಗುತ್ತಿದ್ದು ಈಗ 16 ಲಕ್ಷ ಲೀಟರ್ ಗೆ ತಲುಪಿದೆ. ಒಟ್ಟಾರೆಯಾಗಿ ಹಾಲು ಉತ್ಪಾದನೆಯಲ್ಲಿ 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳ  ಕಾರಣ ಲೀಟರ್ ಗೆ 1.50 ರೂಪಾಯಿ ಕಡಿತ ಮಾಡಲಾಗುವುದೆಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಡಳಿತ ಮಂಡಳಿ ಆದೇಶ ಹೊರಹಾಕಿದೆ..
 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ಬಿಟಿ ಸಿಟಿಯ ಜಂಕ್ಷನ್‌ಗಳಿಗೆ ಸಿಗ್ತಿದೆ ಹೈಟೆಕ್‌ ಟಚ್