ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ, ಮತ್ತು ಗ್ರೂಪ್-ಡಿ ನೌಕರರ ವರ್ಗಾವಣೆ ಆಯಾ ಇಲಾಖೆ ಸಚಿವರಿಗೆ ಅಧಿಕಾರ ಕೊಡಲಾಗಿದೆ.ಜೂನ್ 1 ರಿಂದ ಜೂನ್ 15ರ ಒಳಗೆ ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ.2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳಿಗೆ ಮಾರ್ಗಸೂಚಿ ಬಿಡುಗಡೆಯಾಗಿದ್ದು,ವರ್ಗಾವಣೆ ಮಾರ್ಗಸೂಚಿ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಮೇ & ಜೂನ್ ತಿಂಗಳಲ್ಲಿ ಮಾತ್ರ ಸರ್ಕಾರಿ ನೌಕರರ ವರ್ಗಾವಣೆ ಅವಕಾಶ ಇದೆ.ಮಾರ್ಗಸೂಚಿಯಲ್ಲಿರುವ ಷರತ್ತುಗಳಿಗೆ ಒಳಪಟ್ಟು ವರ್ಗಾವಣೆ ಅವಕಾಶ ನೀಡಲಾಗಿದೆ.ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ನೌಕರರ ಸಂಖ್ಯೆಯಲ್ಲಿ ಶೇ.6% ಮಾತ್ರ ವರ್ಗಾವಣೆ ಅವಕಾಶ ನೀಡಲಾಗುತ್ತದೆ.