ಬೇವಿನ ಮರದಿಂದ ಬಿಳಿ ದ್ರವ ರೂಪದಲ್ಲಿ ಹೆಪ್ಪುಗಟ್ಟಿದ ಹಾಲಿನಂತೆ ಜಿನುಗುತ್ತಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ಬಂದು ನೋಡುತ್ತಿದ್ದಾರೆ.
ಬೇವಿನ ಮರದಲ್ಲಿ ಹಾಲು ಸುರಿಯುತ್ತಿರೋದನ್ನು ನೋಡಲು ಜನ ಜಾತ್ರೆ ಸೇರುತ್ತಿದೆ. ಬಿಳಿ ದ್ರವ ಪದಾರ್ಥವು ಜಿನುಗುತ್ತಿರುವ ದೃಶ್ಯ ನೋಡಲು ಜನರ ದಂಡೇ ಬರುತ್ತಿದೆ.
ವೈಜ್ಞಾನಿಕ ಕಾರಣ ತಿಳಿಯುವ ಮುಂಚೆ ದೇವರ ಮಹಿಮೆ ಎಂದೂ ಕಪೋಲಕಲ್ಪಿತವಾಗಿ ಮೂಢನಂಬಿಕೆ ಹುಟ್ಟುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಈಗಾಗಲೇ ಪೂಜೆ ಪುನಸ್ಕಾರಗಳು ಶುರುವಾಗಿವೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ಇದಾಗಿದೆ.