Publish Date: Mon, 21 Oct 2019 (06:30 IST)
Updated Date: Mon, 21 Oct 2019 (06:32 IST)
ಬೆಂಗಳೂರು : ಗುಲಾಬಿ ಹೂ ಮುಡಿಯಲು ಮಾತ್ರವಲ್ಲ ಅದರಿಂದ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಬಹುದು. ಅದರಿಂದ ತಯಾರಿಸಿದ ಫೇಸ್ ಪ್ಯಾಕ್ ನ್ನು ಮುಖಕ್ಕೆ ಬಳಸುವುದರಿಂದ ಚರ್ಮದಲ್ಲಿರುವ ಕೊಳೆಗಳೆಲ್ಲಾ ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.
ಗುಲಾಬಿ ದಳಗಳನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ 40 ನಿಮಿಷಗಳ ಕಾಲ ನೆನೆಯಲು ಬಿಡಿ. ಬಳಿಕ ಈ ನೆನೆದ ಗುಲಾಬಿ ದಳಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಬಳಿಕ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.