ಬೆಂಗಳೂರು : ಕೊರೊನಾ ಭೀತಿ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆಯನ್ನು ಸೆಪ್ಟಂಬರ್ 1ರಿಂದ ಆರಂಭಿಸಲಾಗುವುದು.
ಲಾಕ್ ಡೌನ್ ನಿಂದ ಮೆಟ್ರೋ ನಷ್ಟ ಅನುಭವಿಸಿದೆ. ಆದಕಾರಣ 5 ತಿಂಗಳ ಬಳಿಕಮೆಟ್ರೋವನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ BMRCL ಸಿದ್ಧತೆ ನಡೆಸಿದೆ. ಪ್ರತಿ ಕೋಚ್ ನಲ್ಲಿ 60 ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ಪ್ರತಿ ಪ್ರಯಾಣಿಕರು ಮಾಸ್ಕ್ ಮತ್ತು ತಪಾಸಣೆ ನಡೆಸುವುದು ಕಡ್ಡಾಯಗೊಳಿಸಲಾಗಿದೆ ಎನ್ನಲಾಗಿದೆ.