Publish Date: Thu, 25 May 2023 (07:55 IST)
Updated Date: Thu, 25 May 2023 (09:32 IST)
ಬೆಂಗಳೂರು : ಮೇ 26 ರಿಂದ ಜೂನ್ 4 ರವರೆಗೆ ಹಾಪ್ಕಾಮ್ಸ್ನಲ್ಲಿ ಮಾವು ಹಾಗೂ ಹಲಸು ಮೇಳವನ್ನು ಆಯೋಜಿಸಲಾಗಿದೆ.
ಮಾವು ಹಾಗೂ ಹಲಸು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರೋತ್ಸಾಹ ನೀಡುವುದರ ನಿಟ್ಟಿನಲ್ಲಿ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇ 26 ರಿಂದ ಜೂನ್ 4 ರವರೆಗೂ ಗ್ರಾಹಕರು ರಿಯಾಯಿತಿ ದರದಲ್ಲಿ ಮಾವು ಹಾಗೂ ಹಲಸನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಾವು, ಹಲಸು ಹಂಗಾಮು ಮುಗಿಯುವವರೆಗೂ ಎಲ್ಲಾ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಮೇಳ ನಡೆಯಲಿದೆ. ಮೇಳದಲ್ಲಿ ಆಲೋನ್ಸ್, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ಬಂಗನ ಪಲ್ಲಿ (ಬೇನಿಷಾ), ದರೇರಿ, ಕಾಲಪಾಡು, ಕೇಸರ್, ನೀಲಂ, ತೋತಾಪುರಿ, ಇಮಾಂಪಸಂದ್ ತಳಿಯ ಮಾವು ಮತ್ತು ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಲಸು ಸಿಗಲಿದೆ.