ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ 1 ರನ್ ಗೆ ಔಟಾಗಿದ್ದಾರೆ.
ಕೊಹ್ಲಿ ವಿಕೆಟ್ ಬಿದ್ದಿದ್ದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಮಾವಿನ ಹಣ್ಣು ತಿಂದು ಹೋಟೆಲ್ ರೂಂನಲ್ಲಿ ಸಂಭ್ರಮಿಸಿದ್ದಾರೆ. ಆರ್ ಸಿಬಿ-ಲಕ್ನೋ ನಡುವಿನ ಪಂದ್ಯದಲ್ಲಿ ನವೀನ್ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು ಅದು ಬಳಿಕ ಕೋಚ್ ಗಂಭೀರ್-ಕೊಹ್ಲಿ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು.
ಲಕ್ನೋ-ಗುಜರಾತ್ ಪಂದ್ಯದಲ್ಲಿ ಕೊಹ್ಲಿ ಗುಜರಾತ್ ಆಟಗಾರರು ಲಕ್ನೋ ಬ್ಯಾಟಿಗರ ವಿಕೆಟ್ ಪಡೆದಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದರು. ಇದೀಗ ನವೀನ್ ಅದಕ್ಕೆ ತಿರುಗೇಟು ಎಂಬಂತೆ ಕೊಹ್ಲಿ ವಿಕೆಟ್ ಉರುಳಿದಾಗ ಮುಂಬೈ ಆಟಗಾರರ ಸಂಭ್ರಮವನ್ನು ಟಿವಿಯಲ್ಲಿ ನೋಡುತ್ತಿರುವ ಗಳಿಗೆಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಎದುರು ಮಾವಿನ ಹಣ್ಣುಗಳನ್ನಿರಿಸಿ, ನಾನು ಇಂತಹಾ ಮಾವಿನ ಹಣ್ಣನ್ನು ಯಾವತ್ತೂ ಸೇವಿಸಿರಲಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ.