Publish Date: Fri, 26 May 2023 (15:07 IST)
Updated Date: Fri, 26 May 2023 (15:13 IST)
ಸಸ್ಯಕಾಶಿ ಲಾಲ್ ಬಾಗ್ ಬಳಿ ಇರುವಹಾಪ್ ಕಾಮ್ಸ್ ನಲ್ಲಿ ಮಾವು ಮತ್ತು ಹಲಸಿನ ಮೇಳ ನಡೆಯುತ್ತಿದೆ.ಮಾವು ಹಾಗೂ ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತೋಟಾಗಾರಿಕೆ ಇಲಾಖೆಯಿಂದ ಮ್ಯಾಂಗೋ ಹಾಗೂ ಹಲಸಿನ ಮೇಳ ಆಯೋಜನೆ ಮಾಡಲಾಗಿದೆ.
ಮೇಳವನ್ನ ಸಚಿವ ರಾಮಲಿಂಗ ರೆಡ್ಡಿ ಹಾಗೂ ಸ್ಥಳೀಯ ಶಾಸಕ ಉದಯ ಗರುಡಾಚಾರ್ ಉದ್ಘಾಟಿಸಲಿದ್ದಾರೆ.ಮ್ಯಾಂಗೋ ಮೇಳಕ್ಕೆ ವಿವಿಧ ಜಿಲ್ಲೆಗಳ ರೈತರು ಆಗಮಿಸಿದ್ದು,ಸದ್ಯ ಲಾಲ್ ಬಾಗ್ ನಲ್ಲಿ 180 ಮಳಿಗೆಗಳನ್ನ ಹಾಕಿದ್ದು,ತೋತಾಪುರಿ,ಬಾದಾಮಿ, ರಸ್ಪೂರಿ, ಮಲ್ಲಿಕಾ, ಮಲ್ಗೋವಾ, ಕಾಡು ಮಾವು , ಕಾಲಪಾಡು, ದಶೇರಿ, ಕೇಸರ್, ನೀಲಂ, ಚಕ್ರಗುತ್ತಾ, ಇಮಾಮ್ ಪಸಂದ್ ಸೇರಿದಂತೆ ಹಲವು ಮಾವು ತಳಿಗಳ ಪ್ರದರ್ಶನ ನಡೆಯುತ್ತಿದೆ.ಇಂದಿನಿಂದ ಜೂನ್ 5 ರವೆಗೂ ನಡೆಯಲಿರುವ ಮಾವು ಮತ್ತು ಹಲಸು ಮೇಳ ನಡೆಯಲಿದೆ.ಮೇಳದಲ್ಲಿ 10% ರಷ್ಟು ರಿಯಾಯಿತಿ ದರ ನಿಗದಿಯನ್ನ ತೋಟಗಾರಿಕೆ ಇಲಾಖೆ ಮಾಡಿದೆ.ಗ್ರಾಹಕರಿಗೆ ಕೈಗೆ ಎಟುಕುವ ದರದಲ್ಲಿ ಮಾವು ಮತ್ತು ಹಲಸಿನ ಹಣ್ಣು ಸಿಗಲಿದೆ.