Publish Date: Fri, 26 May 2023 (13:33 IST)
Updated Date: Fri, 26 May 2023 (14:35 IST)
ಬೆಂಗಳೂರು : ದೆಹಲಿಯಲ್ಲಿ ಸಂಪುಟ ಕಸರತ್ತು ನಡೆಯುತ್ತಿದ್ದು ಪ್ರಮುಖ 5 ಖಾತೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜೊತೆ ನಡೆದ ಸಭೆಯಲ್ಲಿ 5 ಖಾತೆಗಳು ನನಗೆ ಬೇಕೇ ಬೇಕು ಎಂದು ಡಿಕೆಶಿ ಹಠ ಹಿಡಿದಿದ್ದಾರೆ.
ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆ ನೀಡುವಂತೆ ಡಿಕೆಶಿ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ಅಭಿವೃದ್ಧಿ ಹಾಗೂ ಜಲಸಂಪನ್ಮೂಲ ನನಗೆ ಬೇಕು ಡಿಕೆಶಿ ಹೇಳಿದ್ದರೆ ಬೆಂಬಲಿಗರಿಗಾಗಿ ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆಯನ್ನು ಕೇಳಿದ್ದಾರೆ.