Publish Date: Fri, 09 Aug 2019 (10:42 IST)
Updated Date: Fri, 09 Aug 2019 (10:43 IST)
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಚಿಕ್ಕಮಗಳೂರಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ರಸ್ತೆಗೆ ಗುಡ್ಡ ಕುಸಿತವಾಗಿದ್ದು, ಕಳಸ – ಮಂಗಳೂರು ಸಂಚಾರ ಬಂದ್ ಆಗಿದೆ.
ಈಗಾಗಲೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದು, ಇದೀಗ ಅನ್ಯ ಮಾರ್ಗವಾಗಿ ಬಳಕೆಯಾಗುತ್ತಿದ್ದ ಕಳಸ ಮಾರ್ಗವೂ ಬಂದ್ ಆಗಿದೆ.
ಅಲ್ಲದೇ ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಬ್ಬಾಳೆ ಸೇತುವೆ ಬಂದ್ ಆಗಿದೆ. ಇದರಿಂದ ಕಳಸ - ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಹಾಗೇ ಭದ್ರಾ ನದಿ ಅಪಾಯ ಮಟ್ಟ ಮೀತಿ ಹರಿಯುತ್ತಿರುವುದರಿಂದ ಹೊರನಾಡಿನ ಎರಡೂ ಸಂಚಾರಿ ಮಾರ್ಗಗಳು ಬಂದ್ ಆಗಿದೆ.