Publish Date: Tue, 30 Jul 2019 (10:41 IST)
Updated Date: Tue, 30 Jul 2019 (10:43 IST)
ಮಂಗಳೂರು : ಮಾಜಿ ಸಿಎಂ ಎಸ್.ಎ.ಕೃಷ್ಣ ಅಳಿಯ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇದು ಆತ್ಮಹತ್ಯೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.
ಸಿದ್ಧಾರ್ಥ್ ದೊಡ್ಡ ಉದ್ಯಮಿ ಎನಿಸಿಕೊಂಡಿದ್ದರು. ಕಾಫಿ ಬೆಳೆಯುವ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ತಮ್ಮ ಹೊಸ ಹೊಸ ಯೋಜನೆಗಳಿಂದ ಅದನ್ನು ದೊಡ್ಡ ಉದ್ಯಮವನ್ನಾಗಿಸಿದರು. ಆದರೆ ಸಿದ್ಧಾರ್ಥ್ ಅವರ ಇತ್ತೀಚಿನ ವ್ಯವಹಾರ,ಉದ್ಯಮದಲ್ಲಿ ಸಾವಿರಾರು ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ.
‘ವ್ಯವಹಾರಿಕವಾಗಿ ನಾನು ನಷ್ಟ ಅನುಭವಿಸಿದ್ದೇನೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿಯಾಗಿಲ್ಲ. ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ನನ್ನನ್ನು ದಯವಿಟ್ಟು ಕ್ಷಮಿಸಿ’ ಎಂದು ಜು.27ರಂದು ನಿರ್ದೇಶಕ ಮಂಡಳಿಗೆ ಸಿದ್ದಾರ್ಥ್ ಇ-ಮೇಲ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಅನುಮಾನ ಇದೀಗ ವ್ತಕ್ತವಾಗಿದೆ.