Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಸ್ ತಂಗುದಾಣ ಕಳ್ಳತನವಾಗಿದೆ ನೀಡಿದ ದೂರು ಸುಳ್ಳು: ಅಸಲಿ ಕಹಾನಿ‌ ಪತ್ತೆ ಹಚ್ಚಿದ ಪೊಲೀಸರು

ಬಸ್ ತಂಗುದಾಣ ಕಳ್ಳತನವಾಗಿದೆ ನೀಡಿದ ದೂರು ಸುಳ್ಳು: ಅಸಲಿ ಕಹಾನಿ‌ ಪತ್ತೆ ಹಚ್ಚಿದ ಪೊಲೀಸರು
bangalore , ಮಂಗಳವಾರ, 10 ಅಕ್ಟೋಬರ್ 2023 (20:20 IST)
ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಖದೀಮರು ಕಳ್ಳತನ‌ ಮಾಡಿದ್ದಾರೆ ಎಂದು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯಲ್ಲಿ ಬಸ್ ನಿಲ್ದಾಣ ಕಳ್ಳತವಾಗಿಲ್ಲ ಬದಲಿಗೆ‌ ನೀಡಿರುವ ದೂರು ಸುಳ್ಳು ಎಂದು ಪತ್ತೆ ಹಚ್ಚಿದ್ದಾರೆ.
 
ಬಿಬಿಎಂಪಿ ಅನುಮತಿ ಪಡೆದು ತಮ್ಮ ಕಂಪನಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗ 10 ಲಕ್ಷ ರೂ.ವೆಚ್ಚದಲ್ಲಿ ಆ.೨೧ರಂದು ಸೈನ್ ಪೋಸ್ಟ್  ಕಂಪೆನಿಯಿಂದ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಆ.27ರಂದು ಎಲ್ಲ ಬಸ್ ನಿಲ್ದಾಣಗಳನ್ನು ಪರೀಕ್ಷಣೆ ಮಾಡುವಂತೆ ಇಲ್ಲಿಗೂ ಬಂದು ನೋಡಿದಾಗ ಬಸ್ ನಿಲ್ದಾಣವೇ ನಾಪತ್ತೆಯಾಗಿತ್ತು. ಕೂಡಲೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ತಾವು ಬಸ್ ನಿಲ್ದಾಣ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದರು.‌ ತಂಗುದಾಣವನ್ನ ಯಾರೋ ಖದೀಮರು ಕಳ್ಳತನ ಮಾಡಿದ್ದಾರೆ ಎಂದು ಭಾವಿಸಿ ಎನ್.ರವಿ ರೆಡ್ಡಿ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಹೈಗ್ರೌಂಡ್ಸ್ ಪೊಲೀಸರು ಹಿಂದಿನ ಅಸಲಿ ಕಹಾನಿಯನ್ನ ಬಿಚ್ಚಿಟ್ಟಿದ್ದಾರೆ. ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿತ್ತು ಆದರೆ ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದಿರಲಿಲ್ಲ. ಅನುಮತಿವಿಲ್ಲದೆ ಆಗಸ್ಟ್ 21 ಕ್ಕೆ ಬಸ್ ಸ್ಟ್ಯಾಂಡ್ ಕೆಲಸವನ್ನ ರವಿರೆಡ್ಡಿ ಅವರು ಶುರು ಮಾಡಿಸಿದ್ದರು. ಕೆಲಸ ಆರಂಭ ಮಾಡಿದ ಮೊದಲ ದಿನವೇ ಅರ್ಧಕ್ಕೆ‌ ನಿಲ್ಲಿಸಿ, ತಂಗುದಾಣಕ್ಕೆ ಬೇಕಾದ ಉಪಕರಣಗಳನ್ನ ಸ್ಥಳದಲ್ಲೇ ಬಿಟ್ಟಿದ್ದರು. ಇದರಿಂದ ಪಾದಚಾರಿಗಳಿಗೆ ಓಡಾಡಕ್ಕೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಶಿವಾಜಿನಗರದ ಕಾರ್ಯಪಾಲಕ ಅಭಿಯಂತರಿಗೆ (ಎಇಇ) ಸಾರ್ವಜನಿಕರು ದೂರು ನೀಡಿದ್ದರು. ಈ ವೇಳೆ ಬಂದು ಸ್ಥಳ ಪರಿಶೀಲಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ತಪಾಸಣೆ ನಡೆಸಿದಾಗ ಬಸ್ ಸ್ಟ್ಯಾಂಡ್ ಮಾಡಲು ಅನುಮತಿಯೇ ಇರಲಿಲ್ಲ ಎಂಬುದು ಬಯಲಾಗಿದೆ. ಹೀಗಾಗಿ ಫುತ್ ಬಾತ್ ಮೇಲೆ ಬಿದ್ದಿದ್ದ ಮೆಟಿರೀಯಲ್ ಸೀಜ್ ಮಾಡಲಾಗಿತ್ತು. ನಂತರ ಅದನ್ನ ಗೋಡೌನ್ ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು ಇದನ್ನ ಅರಿಯದೆ ಆ. 28 ಕ್ಕೆ ಮೆಟಿರೀಯಲ್ ಕಾಣೆಯಾಗಿರೋದನ್ನು ಗಮನಿಸಿದ ರವಿರೆಡ್ಡಿ ಸೆ.30 ರಂದು ಮತ್ತೆ ಹೈಗ್ರೌಂಡ್ಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ದೂರು ಪಡೆದು ತನಿಖೆ ಮಾಡಿದಾಗ ಅಸಲಿ ಸತ್ಯಾಂಶ ಬಯಲಾಗಿದ್ದು ಸದ್ಯ ರವಿರೆಡ್ಡಿ ವಿರುದ್ದವೇ ದೂರು ನೀಡಲು ಮುಂದಾದ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
 
ಈ ಬಗ್ಗೆ‌ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪ್ರತಿಕ್ರಿಯಿಸಿದ್ದು,  ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ಶೆಲ್ಟರ್ ಕಾಣೆಯಾಗಿದೆ ಎಂದು ದೂರು ಬಂದ ಮೇರೆಗ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾ್ ಬಸ್ ಶೆಲ್ಟರ್ ಕಳ್ಳತನವಾಗಿರಲಿಲ್ಲ ಎಂಬುವುದು ಗೊತ್ತಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ತೆರವುಗೊಳಿಸಿದ್ದರು. ಸೈನ್ ಪೋಸ್ಟ್ ಕಂಪನಿಯವರು ಸುಳ್ಳು  ದೂರು ನೀಡಿದ್ದಾರೆ. ದೂರಿನನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೇವು. ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ ಕಳೆದ ತಿಂಗಳು ಶಿವಾಜಿನಗರ ಕಾರ್ಯಪಾಲಕ ಅಭಿಯಂತರರು ಇದನ್ನು ತೆರವುಗೊಳಿಸಿದ್ದರು.ಸದ್ಯ ಇದು ಸುಳ್ಳು ಕೇಸ್ ಎಂಬುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

,ಟೆಂಡರ್‌ ಆಗಿರೋದನ್ನ‌ ವಾಪಸ್ ಪಡೆದಿರೋದು‌ ಖಂಡನೀಯ-ಎಂಎಲ್ ಸಿ ರವಿಕುಮಾರ್