Publish Date: Mon, 20 Dec 2021 (10:15 IST)
Updated Date: Mon, 20 Dec 2021 (10:26 IST)
ಬೆಂಗಳೂರು: ಹಳೆಯ ವೈಷಮ್ಯ ಸಾಧಿಸಲು ಖದೀಮನೊಬ್ಬ ವಿಮಾನದಲ್ಲಿ ಬಂದು ಬಟ್ಟೆ ಅಂಗಡಿಯಿಂದ ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ರಾಜಸ್ಥಾನ್ ಮೂಲದ ಯುವಕ ಆರೋಪಿ. ಈತ ಇದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಆಗ ಕಳ್ಳತನ ಮಾಡಿ ಮಾಲಿಕನ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಹೀಗಾಗಿ ಆತನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಈ ಬಗ್ಗೆ ಮಾಲಿಕನ ಮೇಲೆ ಸಿಟ್ಟಿತ್ತು.
ಅದೇ ಸಿಟ್ಟಿನಲ್ಲಿ ರಾಜಸ್ಥಾನ್ ನಿಂದ ವಿಮಾನದಲ್ಲಿ ಬಂದು ಯಾರೂ ಇಲ್ಲದ ವೇಳೆ ಅಂಗಡಿಯ ಡ್ರಾಯರ್ ನಲ್ಲಿದ್ದ 2 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿದ್ದಾನೆ.