Publish Date: Mon, 20 Dec 2021 (09:10 IST)
Updated Date: Mon, 20 Dec 2021 (09:41 IST)
ಮಂಡ್ಯ: ಪ್ರೀತಿಸಿದ ಜೋಡಿ ಜೀವಗಳ ಒಂದು ಮಾಡಿದ ತಪ್ಪಿಗೆ ಇಲ್ಲೊಬ್ಬ ಯುವಕ ಪ್ರಾಣ ಕಳೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.
21 ವರ್ಷದ ರಕ್ಷಿತ್ ಎಂಬಾತ ಕೆಲವು ತಿಂಗಳ ಹಿಂದೆ ತನ್ನ ಸ್ನೇಹಿತನಿಗೆ ಪ್ರೀತಿಸಿದ ಹುಡುಗಿ ಜೊತೆ ಮದುವೆ ಮಾಡಿಸಿದ್ದ. ಇದೇ ವಿಚಾರವಾಗಿ ಆತನ ಸ್ನೇಹಿತರ ಗ್ಯಾಂಗ್ ನಲ್ಲಿ ಆಗಾಗ ಸಂಘರ್ಷಗಳಾಗುತ್ತಿತ್ತು.
ಇದೇ ರೀತಿ ಮೊನ್ನೆಯೂ ಜಗಳ ತಾರಕಕ್ಕೇರಿ ಸ್ನೇಹಿತರೇ ರಕ್ಷಿತ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಗಾಯಗೊಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ರಕ್ಷಿತ್ ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.