Webdunia - Bharat's app for daily news and videos

Install App

ಐಷಾರಾಮಿ ಕಾರಿನಲ್ಲಿ ಬಂದು ಕಳ್ಳತನ; ಕದ್ದ ಚಿನ್ನ ಪತ್ನಿಯರ ಹೆಸರಿನಲ್ಲಿ ಅಡವಿಡುತ್ತಿದ್ದ ಕಳ್ಳ!

Webdunia
ಸೋಮವಾರ, 30 ಆಗಸ್ಟ್ 2021 (19:25 IST)
ಇವನು ಅಂತಿಲ್ಲ ಕಳ್ಳ ಅಲ್ಲ‌...ಮಾಡೋದು ಕಳ್ಳತನ ಅದರೂ ಐಷಾರಾಮಿ ಕಾರಿನಲ್ಲಿ ಬಂದು ಚಿನ್ನಾಭರಣ ಕಳ್ಳತನ ಮಾಡಿದ್ದೂ ಅಲ್ಲದೇ ಸಿಕ್ಕಿ ಹಾಕಿಕೊಳ್ಳಬಾರದು ಅಂತ ತನ್ನ ಇಬ್ಬ
ರು ಹೆಂಡತಿಯರ ಹೆಸರಿನಲ್ಲಿ ಅಡವಿಡುತ್ತಿದ್ದ ಐನಾತಿ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ಹೆಸರು ಮಂಜುನಾಥ್ ಅಲಿಯಾಸ್ ಕಳ್ಳ್ ಮಂಜ. ಈತ ರಾಯಲ್ ಅಗಿ ಸ್ವೀಪ್ಟ್ ಕಾರಿನಲ್ಲಿ ಬಂದು ಒಂದೈದು ನಿಮಿಷ ಕಾರಿನಲ್ಲಿ ಕುಳಿತಿರುತ್ತಾನೆ, ಅಮೇಲೆ ಅಲ್ಲಿನ ರಸ್ತೆಯಲ್ಲಿ ಬರೀ ಕೈನಲ್ಲಿ ನಡೆದುಕೊಂಡು ಹೋಗುತ್ತಾನೆ. ಹಾಗೆ ಹೋಗಿ ಹೀಗೆ ಬರುವಷ್ಟರಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿ ನಾಪತ್ತೆಯಾಗುತ್ತಾನೆ.
ಹೌದು ಅಗಸ್ಟ್ 4ನೇ ತಾರೀಕಿನಂದು ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದ ಗಂಗಮ್ಮ ಎಂಬುವರ ಮನೆಯಲ್ಲಿ ಈ ಕಳ್ಳ ಮಂಜ ಐದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಮಾದನಾಯಕ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು... ಆರೋಪಿಗೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಈತನನ್ನ ಬಂಧಿಸಿದ್ದಾರೆ. ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ ಈತ, ಕಳ್ಳತವನ್ನ ಕೂಡ ಅಷ್ಟೇ ಐಷಾರಾಮಿಯಾಗೆ ಮಾಡುತ್ತಿದ್ದ. ಅಲ್ಲದೆ ಇವ ಕಳ್ಳತನಕ್ಕೆ ಇಳಿದಾಗ ಮೊಬೈಲ್‌ ಕೂಡ ಬಳಸುತ್ತಿರಲಿಲ್ವಂತೆ...
ಇತ್ತೀಚೆಗೆ ಯಾವುದೋ ಒಂದು ಪ್ರಕರಣದಲ್ಲಿ ವಕೀಲರಿಗೆ ಹಣ ಕೊಡಲು ಕಾಸಿಲ್ಲದಿದ್ದಾಗ ಗೋವಿಂದಪುರದ ಗಂಗಮ್ಮರ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಕಳ್ಳತನ ಮಾಡಿದ ಚಿನ್ನವನ್ನ ಈತನ ಇಬ್ಬರು ಹೆಂಡತಿಯರ ಹೆಸರಿನಲ್ಲಿ ಒತ್ತೆ ಇಡುತ್ತಿದ್ದೆ ಎಂದು ಪೊಲೀಸರ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.
ಈತ 16ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ತುಮಕೂರು ಒಂದರಲ್ಲೇ 14, ದಾಬಸ್ ಪೇಟೆ 1, ಮಾದನಾಯಕನಹಳ್ಳಿ1, ಪ್ರಕರಣ ಇವನ ಮೇಲೆ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

ಮುಂದಿನ ಸುದ್ದಿ
Show comments