ನರ್ಸರಿ ಗಿಡಗಳನ್ನು ತುಂಬಿದ ಲಾರಿಯಲ್ಲಿ 3400 ಕೆಜಿ ಗಾಂಜಾ ಪತ್ತೆಯಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ವಲಯದ ಎಸಿಬಿ ಅಧಿಕಾರಿಗಳು ಹೈದರಾಬಾದ್ ರಿಂಗ್ ರಸ್ತೆಯಲ್ಲಿ ನರ್ಸರಿ ಗಿಡಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ತಡೆದು ಪರಿಶೀಲಿಸಿದಾಗ ಕೋಟ್ಯಂತರ ರೂ. ಮೌ
ಲ್ಯದ 3400 ಕೆಜಿ ಗಾಂಜಾ ಪತ್ತೆ ಹಚ್ಚಿದ್ದಾರೆ.
ಮಹಾರಾಷ್ಟ್ರ ಮೂಲದ ಶಿಂಧೆ, ಕಾಂಬ್ಳೆ, ಜೋಗ್ದಂದ್ ಎಂಬ ಮೂವರು ಆರೋಪಿಗನ್ನು ಬಂಧಿಸಲಾಗಿದೆ. ಇವರು ಮಹಾರಾಷ್ಟ್ರ, ಪುಣೆ, ಥಾಣೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು.
ಮಹಾರಾಷ್ಟ್ರದ ನೋಂದಣಿ ಹೊಂದಿದ್ದ ಲಾರಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಗಿಡದ ಬುಡದಲ್ಲಿನ ಮಣ್ಣಿನ ಜೊತೆ ಪ್ಲಾಸ್ಟಿಕ್ ನಿಂದ ಗಾಂಜಾ ಸುತ್ತಿ ಮಣ್ಣು ಮುಚ್ಚಿ ಸಾಗಿಸಲಾಗುತ್ತಿತ್ತು.
ಇದೇ ವರ್ಷದಲ್ಲಿ ಆಗಸ್ಟ್ ತಿಂಗಳ ವರೆಗೆ ಒಟ್ಟು 7500 ಕೆಜಿ ಗಾಂಜಾ ಜಪ್ತಿ ಮಾಡಿರುವ ಎನ್ ಸಿಬಿ ಅಧಿಕಾರಿಗಳು, ಇದೇ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಜಪ್ತಿ ಮಾಡಿದ್ದಾರೆ.