Select Your Language

Notifications

webdunia
webdunia
webdunia
webdunia

ಮೈಸೂರು: ಪತ್ನಿ ರುಂಡ ಕತ್ತರಿಸಿ ಕೊಂದ ಕಿರಾತಕ ಪತಿ

mysore wife husban ಮೈಸೂರು ಪತಿ ಪತ್ನಿ

ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತಿ ಆಕೆಯ ರುಂಡ ಕತ್ತರಿಸಿ ಕೊಂದ ಭೀಕರ ಘಟನೆ ಮೈಸೂರು ಜಿಲ್ಲೆ ವರುಣಾ ಬಳಿಯ ಚೆಟ್ಟನಹಳ್ಳಿಯಲ್ಲಿ ನಡೆದಿದೆ.

ನಲವತ್ತು ವರ್ಷದ ಪುಟ್ಟಮ್ಮ ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿ ದೇವರಾಜ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ದಂಪತಿಗೆ 20 ವರ್ಷದ ಮಗಳಿದ್ದು, ಆಕೆ ಕಾಲೇಜಿಗೆ ಹೋಗಿದ್ದಾಗ ಪತ್ನಿ ಜೊತೆ ಜಗಳ ತೆಗೆದ ದೇವರಾಜ್‌ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪದೇಪದೆ ಪತ್ನಿಯ ಶೀಲ ಶಂಕಿಸಿ ಜಗಳ ತೆಗೆಯುತ್ತಿದ್ದ ದೇವರಾಜ್‌, ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ, ಇದೀಗ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

40 ಪರ್ಸೆಂಟ್‌ ಕಮಿಷನ್‌ ವಿವಾದ: ಪ್ರಧಾನಿ ಕಚೇರಿಯಿಂದ ಕೆಂಪಣ್ಣಗೆ ಬುಲಾವ್!